ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಇದೇ ಸಂದರ್ಭದಲ್ಲಿ ಪಿಯುಸಿ ಬಳಿಕ ಮುಂದೆ ಯಾವ ಕೋರ್ಸ್ (UG Courses After PUC) ಅತ್ಯುತ್ತಮ ಎಂಬ ಪ್ರಶ್ನೆಯು ವಿದ್ಯಾರ್ಥಿಗಳಲ್ಲಿ/ಹೆತ್ತವರಲ್ಲಿಇರಬಹುದು. ಇಲ್ಲೊಂದಿಷ್ಟು ಕೋರ್ಸ್‌ಗಳ ಪಟ್ಟಿ ನೀಡಲಾಗಿದ್ದು, ಪರಿಶೀಲಿಸಿ.

: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ (karnataka 2nd puc result 2024) ಪ್ರಕಟವಾಗಿದೆ. ಇದೇ ಸಂದರ್ಭದಲ್ಲಿ ಪಿಯುಸಿ ಬಳಿಕ ಮುಂದೆ ಯಾವ ಕೋರ್ಸ್ (UG Courses After PUC) ಅತ್ಯುತ್ತಮ ಎಂಬ ಪ್ರಶ್ನೆಯು ವಿದ್ಯಾರ್ಥಿಗಳಲ್ಲಿ/ಹೆತ್ತವರಲ್ಲಿ ಕಾಡುತ್ತಿರಬಹುದು. ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ಗೆ ಜಗತ್ತು ತೆರೆದುಕೊಳ್ಳುತ್ತಿರುವ ಈ ಕಾಲದಲ್ಲಿ ಯಾವ ಕೋರ್ಸ್ ಕಲಿತರೆ ಉತ್ತಮ, ಯಾವ ಕೋರ್ಸ್ ಕಲಿತರೆ ಉದ್ಯೋಗ ದೊರಕಬಹುದು? ಯಾವ ಕೋರ್ಸ್ ಕಲಿತರೆ ಉತ್ತಮ ವೇತನ ದೊರಕಬಹುದು? ಯಾವ ಕೋರ್ಸ್ ಕಲಿತರೆ ನೆಮ್ಮದಿಯ ಉದ್ಯೋಗ ಮಾಡಬಹುದು ಎಂದೆಲ್ಲ ವಿದ್ಯಾರ್ಥಿಗಳು ಆಲೋಚಿಸುತ್ತಿರಬಹುದು. ಪಿಯುಸಿಯಲ್ಲಿ ಆರ್ಟ್ಸ್, ಕಾಮರ್ಸ್, ಸೈನ್ಸ್ ಓದಿರುವವರ ಮುಂದೆ ಹಲವು ಆಯ್ಕೆಗಳು ಇರಬಹುದು. ಕೆಲವರಿಗೆ ಮುಂದೆ ಯಾವೆಲ್ಲ ಆಯ್ಕೆ ಇದೆ ಎಂಬ ಮಾಹಿತಿ ಇಲ್ಲದೆಯೂ ಇರಬಹುದು. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಈ ಶುಭ ಸಮಯದಲ್ಲಿ ಪಿಯುಸಿ ಬಳಿಕ ವಿದ್ಯಾರ್ಥಿಗಳ ಮುಂದಿರುವ ವಿವಿಧ ಆಯ್ಕೆಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಈ ಜಗತ್ತಿನಲ್ಲಿ ಲಭ್ಯವಿರುವ ಸಾವಿರಾರು ಆಯ್ಕೆಗಳಲ್ಲಿ ಕೆಲವೊಂದಷ್ಟನ್ನು ಇಲ್ಲಿ ನೀಡಲಾಗಿದೆ. ಇದರ ಹೊರತಾಗಿಯೂ ಹೊಸ ಬಗೆಯ ಕರಿಯರ್ ರೂಪಿಸಿಕೊಳ್ಳಲು ಅನುವು ಮಾಡಿಕೊಡುವಂತಹ ಕೋರ್ಸ್‌ಗಳನ್ನು ನೀವು ಹುಡುಕಬಹುದು.
ವಿದ್ಯಾರ್ಥಿಗಳು ಮುಂದಿನ ಕೋರ್ಸ್ ಆಯ್ಕೆ ಮಾಡಿಕೊಳ್ಳುವಾಗ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಆಯ್ಕೆಯು ಮುಂದಿನ ನಿಮ್ಮ ಜೀವನವಾಗಿರಲಿದೆ ಎಂದು ತಿಳಿದಿರಬೇಕು. ನೀವು ಸಮುದ್ರದಲ್ಲಿ ಹಡಗಿನಲ್ಲಿ ಕೆಲಸ ಮಾಡುವ ಕೋರ್ಸ್ ಆಯ್ಕೆ ಮಾಡಿಕೊಂಡರೆ ಭವಿಷ್ಯದಲ್ಲಿ ಹಲವು ತಿಂಗಳ ಕಾಲ ಸಮುದ್ರದಲ್ಲಿ ವಾಸಿಸಲು ಸಿದ್ಧರಿರಬೇಕು. ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಡಿಸೈನ್, ಕಾನೂನು, ಅಪ್ಲೈಡ್ ಸೈನ್ಸ್, ಬಿಸಿನೆಸ್ ಸ್ಟಡೀಸ್, ಮ್ಯಾನೇಜ್‌ಮೆಂಟ್, ಬಿಹೇವಿಯರಲ್ ಮತ್ತು ಸೋಶಿಯಲ್ ಸೈನ್ಸಸ್, ಎಕನಾಮಿಕ್ಸ್, ಮೀಡಿಯಾ, ಹ್ಯುಮಾನಿಟೀಸ್ ಸೇರಿದಂತೆ ನಿಮ್ಮ ಮುಂದೆ ವೈವಿಧ್ಯಮಯ ಆಯ್ಕೆಗಳಿವೆ.
ಪಿಯುಸಿ ಆರ್ಟ್ಸ್ ಬಳಿಕ ನಿಮ್ಮ ಮುಂದಿರುವ ಕೆಲವು ಆಯ್ಕೆಗಳು.
ಬಿಬಿಎ- ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್
ಬಿಎಂಎಸ್- ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್
ಬಿಎಫ್‌ಎ- ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್
ಬಿಇಎಂ- ಬ್ಯಾಚುಲರ್ ಆಫ್ ಇವೆಂಟ್ ಮ್ಯಾನೇಜ್‌ಮೆಂಟ್
ಬಿಎ + ಎಲ್ಎಲ್ ಬಿ: ಇಂಟಿಗ್ರೇಟೆಡ್ ಲಾ ಕೋರ್ಸ್
ಬಿಜೆಎಂಸಿ- ಬ್ಯಾಚುಲರ್ ಆಫ್ ಮಾಸ್ ಕಮ್ಯುನಿಕೇಷನ್ ಆಂಡ್ ಜರ್ನಲಿಸಂ
ಬಿಎಫ್‌ಡಿ- ಬ್ಯಾಚುಲರ್ ಆಫ್ ಫ್ಯಾಶನ್ ಡಿಸೈನಿಂಗ್
ಬಿಎಸ್‌ಡಬ್ಲ್ಯು- ಸಮಾಜಕಾರ್ಯ ಪದವಿ
ಬಿಬಿಎಸ್- ಬ್ಯಾಚುಲರ್ ಆಫ್ ಬಿಸಿನೆಸ್ ಸ್ಟಡೀಸ್
ಬಿಟಿಟಿಎಂ- ಬ್ಯಾಚುಲರ್ ಆಫ್ ಟ್ರಾವೆಲ್ ಮತ್ತು ಟೂರಿಸಂ ಮ್ಯಾನೇಜ್‌ಮೆಂಟ್ ವಾಯುಯಾನ ಕೋರ್ಸ್‌ಗಳು
ಬಿಎಸ್ಸಿ- ಇಂಟೀರಿಯರ್ ಡಿಸೈನ್
ಬಿಎಸ್ಸಿ- ಆತಿಥ್ಯ ಮತ್ತು ಹೋಟೇಲ್ ಮ್ಯಾನೇಜ್‌ಮೆಂಟ್
ಬ್ಯಾಚುಲರ್ ಆಫ್ ಡಿಸೈನ್ (ಬಿ. ಡಿಸೈನ್)
ಬ್ಯಾಚುಲರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್
ಬಿ.ಎ.
ದ್ವಿತೀಯ ಪಿಯುಸಿ ವಿಜ್ಞಾನ ಓದಿರುವವರ ಮುಂದಿರುವ ಕೆಲವು ಆಯ್ಕೆಗಳು
ಬಿಇ/ಬಿಟೆಕ್: ಬ್ಯಾಚುಲರ್ ಆಫ್ ಟೆಕ್ನಾಲಜಿ
ಬಿ.ಆರ್ಕ್: ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್
ಬಿಸಿಎ: ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್
ಬಿಎಸ್ಸಿ: ಮಾಹಿತಿ ತಂತ್ರಜ್ಞಾನ
ಬಿ.ಎಸ್ಸಿ: ನರ್ಸಿಂಗ್
ಬಿಫಾರ್ಮಾ: ಬ್ಯಾಚುಲರ್ ಆಫ್ ಫಾರ್ಮಸಿ
ಬಿಎಸ್ಸಿ: ಇಂಟೀರಿಯರ್ ಡಿಸೈನ್
ಬಿಡಿಎಸ್: ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ
ಅನಿಮೇಷನ್, ಗ್ರಾಫಿಕ್ಸ್ ಮತ್ತು ಮಲ್ಟಿಮೀಡಿಯಾ
ಬಿ.ಎಸ್ಸಿ.: ನ್ಯೂಟ್ರಿಷಿಯನ್ ಆಂಡ್ ಡಯಾಬಿಟಿಕ್ಸ್
ಬಿಪಿಟಿ: ಬ್ಯಾಚುಲರ್ ಆಫ್ ಫಿಸಿಯೋಥೆರಪಿ
ಬಿಎಸ್ಸಿ: ಅನ್ವಯಿಕ ಭೂವಿಜ್ಞಾನ
ಬಿಎ/ಬಿ.ಎಸ್ಸಿ. ಮುಕ್ತ ಕಲೆ/ ಲಿಬರಲ್ ಆರ್ಟ್ಸ್
ಬಿಎಸ್ಸಿ: ಭೌತಶಾಸ್ತ್ರ
ಬಿ.ಎಸ್ಸಿ. ರಸಾಯನಶಾಸ್ತ್ರ
ಬಿ.ಎಸ್ಸಿ. ಗಣಿತಶಾಸ್ತ್ರ
ಬಿಟೆಕ್‌ನಡಿ ನಿಮಗಿರುವ ಹಲವು ಆಯ್ಕೆಗಳು.
ಏರೋನಾಟಿಕಲ್ ಇಂಜಿನಿಯರಿಂಗ್
ಆಟೋಮೊಬೈಲ್ ಎಂಜಿನಿಯರಿಂಗ್
ಸಿವಿಲ್ ಇಂಜಿನಿಯರಿಂಗ್
ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್
ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್
ಆಟೊಮೇಷನ್ ಮತ್ತು ರೊಬೊಟಿಕ್ಸ್
ಪೆಟ್ರೋಲಿಯಂ ಎಂಜಿನಿಯರಿಂಗ್
ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್
ಸೆರಾಮಿಕ್ ಎಂಜಿನಿಯರಿಂಗ್
ಕೆಮಿಕಲ್ ಎಂಜಿನಿಯರಿಂಗ್
ಸ್ಟ್ರಕ್ಚರಲ್ ಇಂಜಿನಿಯರಿಂಗ್
ಟ್ರಾನ್ಸ್‌ಪೋರ್ಟ್ ಎಂಜಿನಿಯರಿಂಗ್
ಕನ್‌ಸ್ಟ್ರಕ್ಷನ್ ಎಂಜಿನಿಯರಿಂಗ್
ಪವರ್ ಎಂಜಿನಿಯರಿಂಗ್
ರೊಬೊಟಿಕ್ಸ್ ಎಂಜಿನಿಯರಿಂಗ್
ಜವಳಿ ಎಂಜಿನಿಯರಿಂಗ್
ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಆಟೊಮೇಷನ್
ಪಿಯುಸಿ ವಾಣಿಜ್ಯ ವಿಷಯ ಓದಿದವರಿಗೆ ಇರುವ ಕೆಲವು ಆಯ್ಕೆಗಳು.
ಬಿ.ಕಾಂ- ವಾಣಿಜ್ಯ ಪದವಿ
ಬಿಬಿಎ- ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್
ಬಿ.ಕಾಂ (ಹಾನರ್ಸ್.)
ಅರ್ಥಶಾಸ್ತ್ರದಲ್ಲಿ ಬಿಎ (ಆನರ್ಸ್).
ಬಿಕಾಂ, ಎಲ್‌ಎಲ್‌ಬಿ
ಬಿಬಿಎ ಎಎಲ್‌ಬಿ.
ಪಿಯುಸಿ ಬಳಿಕ ಓದಬಹುದಾದ ಕೆಲವು ವೃತ್ತಿಪರ ಕೋರ್ಸ್‌ಗಳು.
ಸಿಎ: ಚಾರ್ಟರ್ಡ್ ಅಕೌಂಟೆನ್ಸಿ
ಸಿಎಸ್ಸಿ: ಕಂಪನಿ ಕಾರ್ಯದರ್ಶಿ
ಬ್ಯಾಚುಲರ್ ಆಫ್ ಡಿಸೈನ್ (ಆಕ್ಸೆಸರಿ ಡಿಸೈನ್, ಸೆರಾಮಿಕ್, ಲೆದರ್, ಗ್ರಾಫಿಕ್, ಇಂಡಸ್ಟ್ರಿ, ಜುವೆಲ್ಲರಿ ಡಿಸೈನ್ ಇತ್ಯಾದಿ)
ವಿದೇಶಿ ಭಾಷೆಯಲ್ಲಿ ಪದವಿ
ಡಿಪ್ಲೊಮಾ ಕೋರ್ಸ್‌ಗಳು
ಅಡ್ವಾನ್ಸಡ್ ಡಿಪ್ಲೊಮಾ ಕೋರ್ಸ್‌ಗಳು
ಸರ್ಟಿಫಿಕೇಟ್ ಕೋರ್ಸ್‌ಗಳು
ಹೀಗೆ, ಪಿಯುಸಿ ಓದಿದ ಬಳಿಕ ವಿದ್ಯಾರ್ಥಿಗಳ ಮುಂದೆ ವೈವಿಧ್ಯಮಯ ಆಯ್ಕೆಗಳಿವೆ. ನಿಮ್ಮ ನೆಮ್ಮದಿಯ ನಾಳೆಯನ್ನು ಗಮನದಲ್ಲಿಟ್ಟುಕೊಂಡು, ಅತ್ಯುತ್ತಮ ಕರಿಯರ್ ರೂಪಿಸಲು ನೆರವಾಗುವ ಕೋರ್ಸ್ ಆಯ್ಕೆ ಮಾಡಿ.