March 14, 2025

ಕ. ಕಾ. ಪ. ಸಂಪಾದಕರ ಹಾಗೂ ವಾರದಿಗಾರರ ಸಂಘಟನೆಯ ಉಡುಪಿ ಜಿಲ್ಲಾ ಕಚೇರಿ ಉದ್ಘಾಟನೆಗೆ ಸನ್ಮಾನ್ಯ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಮಲ್ಪೆ ಈಶ್ವರ್ ಅವರನ್ನು ಭೇಟಿ.

Spread the love



ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ, ಸಂಪಾದಕರ ಹಾಗೂ ವಾರದಿಗಾರರ ಸಂಘಟನೆಯ ಉಡುಪಿ ಜಿಲ್ಲಾ ಕಚೇರಿ ಉದ್ಘಾಟನಾ ಸಮಾರಂಭದ ಆಹ್ವಾನ ನೀಡುವ ಸಲುವಾಗಿ ಸಂಘಟನೆಯ ಪ್ರಮುಖರು ಸಾಮಾಜಿಕ ಹೋರಾಟಗಾರರಾದ ಶ್ರೀ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಹೆಸರಾಂತ ಸಮಾಜಸೇವಕರಾದ ಮಲ್ಪೆ ಈಶ್ವರ್ ಅವರನ್ನು ಭೇಟಿ ಮಾಡಿದರು.



ಈ ಸಂದರ್ಭ ಮಹೇಶ್ ಶೆಟ್ಟಿ ತಿಮರೋಡಿಯವರೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಪ್ರಸ್ತುತ ಸಾಮಾಜಿಕ ಸಮಸ್ಯೆಗಳು, ಮಾಧ್ಯಮಗಳ ಪ್ರಭಾವ ಹಾಗೂ ಹಿತಾಸಕ್ತಿಗಳ ಕುರಿತಂತೆ ಚರ್ಚೆ ನಡೆಸಲಾಯಿತು. ಅವರು ತಮ್ಮ ಅನುಭವ ಹಂಚಿಕೊಂಡು, ಮಾಧ್ಯಮ ಮತ್ತು ಸಮಾಜದ ಹಿತವನ್ನು ಒಟ್ಟಿಗೆ ಕಾಪಾಡುವ ಮಹತ್ವವನ್ನು ಉಲ್ಲೇಖಿಸಿದರು.

ನಂತರ ಮಲ್ಪೆ ಈಶ್ವರ್ ಅವರನ್ನು ಭೇಟಿ ಮಾಡಲಾಯಿತು. ಸಮಾಜಸೇವೆ ಹಾಗೂ ಅದನ್ನು ಬಲಪಡಿಸಲು ಮಾಧ್ಯಮಗಳ ಪಾತ್ರ ಕುರಿತಂತೆ ಚರ್ಚೆ ನಡೆಯಿತು. ಅವರು ತಮ್ಮ ಸಮಾಜಸೇವೆ ಕುರಿತ ಅನೇಕ ಅನುಭವಗಳನ್ನು ಹಂಚಿಕೊಂಡು, ಮಾಧ್ಯಮಗಳ ಸಹಕಾರವು ಸಮಾಜದ ಉದ್ದಾರಕ್ಕಾಗಿ ಎಷ್ಟು ಮಹತ್ವದ್ದೆಂಬುದನ್ನು ತಿಳಿಸಿದರು.

ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಭೇಟಿಯ ವೇಳೆ ಉಪಸ್ಥಿತರಿದ್ದು, ಉಡುಪಿ ಜಿಲ್ಲೆಯ ಪತ್ರಕರ್ತರ ಸಂಘಟನೆಯ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿದರು. ಮಾಧ್ಯಮ ಕ್ಷೇತ್ರದ ಸಕ್ರಿಯತೆಯನ್ನು ಉತ್ತೇಜಿಸುವ ಮತ್ತು ಪ್ರಾದೇಶಿಕ ಪತ್ರಕರ್ತರಿಗೆ ಸಹಕಾರ ನೀಡುವ ಉದ್ದೇಶದಿಂದ ಉಡುಪಿ ಜಿಲ್ಲಾ ಕಚೇರಿಯನ್ನು ಸ್ಥಾಪಿಸಲಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವೆಂದು ಸಂಘಟನೆಯವರು ಅಭಿಪ್ರಾಯಪಟ್ಟರು.