March 14, 2025

ಉಡುಪಿ ಜಿಲ್ಲಾ ಕಛೇರಿಯ ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ನಡೆಯಲಿ ಎಂಬ ಹಾರೈಕೆಯೊಂದಿಗೆ,

Spread the love

ತುಮಕೂರು :

ತುಮಕೂರು ಜಿಲ್ಲಾ ಘಟಕದ ವತಿಯಿಂದ ಬೆಂಗಳೂರು ವಿಭಾಗೀಯ ಅಧ್ಯಕ್ಷ ವಿಜಯ್ ಮುನಿಯಪ್ಪ ಅವರಿಗೆ ಗೌರವ ಸಲ್ಲಿಸುವ ಸನ್ಮಾನ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾಧ್ಯಕ್ಷ  ಜಿ.ಎಲ್. ನಟರಾಜು ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಲ್ಲಾಸ್ ಮಹಮ್ಮದ್ ಅವರಿಂದ, ಸಂಘದ ಬೆಳವಣಿಗೆಗೆ *ವಿಭಾಗೀಯ ಅಧ್ಯಕ್ಷರು ನೀಡಿದ ಮಾರ್ಗದರ್ಶನಕ್ಕಾಗಿ ಕೃತಜ್ಞತೆ ಸಲ್ಲಿಸಲಾಯಿತು.


ಸಂಘದ ಕಾರ್ಯಪದ್ಧತಿ, ಸಂಘಟನಾ ಶಕ್ತಿ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು. ಈ ಸನ್ಮಾನ ಸಮಾರಂಭದಲ್ಲಿ ಕೆಲವರು ಮಾತ್ರ ಭಾಗವಹಿಸಿದ್ದರೂ, ಸಂಘಟನೆಯ ಉದ್ದೇಶಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು.

*ಉಡುಪಿ ಜಿಲ್ಲಾ ಕಛೇರಿಯ ಉದ್ಘಾಟನೆ ಯಶಸ್ವಿಯಾಗಿ ನಡೆಯಲಿ ಎಂಬ ಹಾರೈಕೆಯೊಂದಿಗೆ…!*