March 14, 2025

ಉಡುಪಿ ಅಡ್ವೋಕೇಟ್ಸ್ ವೆಲ್ಫೇರ್, ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್‌ನ ಚೇರ್ಕಾಡಿ ವಿಜಯ ಹೆಗ್ಡೆ ಮೆಮೋರಿಯಲ್ ಟ್ರೋಫಿ ಕ್ರೀಡಾಕೂಟ ಸಮಾರೋಪ ಸಮಾರಂಭ…!?

Spread the love


ಉಡುಪಿ: ಉಡುಪಿ ಅಡ್ವೋಕೇಟ್ಸ್ ವೆಲ್ಫೇರ್, ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್‌ನ ವತಿಯಿಂದ ಆಯೋಜಿಸಿದ್ದ ಚೇರ್ಕಾಡಿ ವಿಜಯ ಹೆಗ್ಡೆ ಮೆಮೋರಿಯಲ್ ಟ್ರೋಫಿ ಕ್ರೀಡಾಕೂಟದ ಸಮಾರೋಪ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಕ್ರೀಡಾಕೂಟದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದಿದ್ದು, ಭಾಗವಹಿಸಿದ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಈ ಸಮಾರಂಭದಲ್ಲಿ ಪ್ರಸಾದ್ರಾಜ್ ಕಾಂಚನ್ ಭಾಗವಹಿಸಿ, ವಿಜೇತರು ಹಾಗೂ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳನ್ನು ಅಭಿನಂದಿಸಿದರು. ಅವರು ಮಾತನಾಡಿ, ಕ್ರೀಡಾ ಸ್ಪರ್ಧೆಗಳು ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದರ ಜೊತೆಗೆ ಸಹಕಾರ ಮತ್ತು ಶಿಸ್ತು ಕಲಿಸುವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಅವರು ಈ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಿದ ಉಡುಪಿ ಅಡ್ವೋಕೇಟ್ಸ್ ವೆಲ್ಫೇರ್, ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್‌ಗೆ ಶ್ಲಾಘನೆ ಸಲ್ಲಿಸಿದರು. ಸಮಾರಂಭದಲ್ಲಿ ಸಂಘಟಕರು, ಕ್ರೀಡಾಪಟುಗಳು, ಅಭಿಮಾನಿಗಳು ಮತ್ತು ಗಣ್ಯರು ಹಾಜರಿದ್ದರು.

ವರದಿ : ಆರತಿ ಗಿಳಿಯಾರ್