
ಉಡುಪಿ : ಕಾರ್ಯನಿರತ ಪತ್ರಕರ್ತರ, ಸಂಪಾದಕರ ಹಾಗೂ ವರದಿಗಾರರ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಸಾಮಾಜಿಕ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮ್ಮರೋಡಿ ಆಗಮಿಸಿ ಸಂಘಟನೆಯ ಬೆಳವಣಿಗೆಯ ನಮ್ಮ ಬೆಂಬಲವಿದೆ ಎಂದು ಮತ್ತು ನಿಮ್ಮ ಸಂಘಟನೆಯು ಅಲವು ಬುಕ್ಕಿಂಗ್ ಪತ್ರಕರ್ತರಂತೆ ನೀವು ಹಾಗಬಾರದೆಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.
ಅವರು ಮಾತನಾಡಿ, “ಸತ್ಯವನ್ನು ಬಹಿರಂಗಪಡಿಸುವ ಜವಾಬ್ದಾರಿಯಿರುವ ಮಾಧ್ಯಮಗಳು, ಕೆಲವು ಕಡೆ ಅಧಿಕಾರಿಗಳಿಗೆ ಮಣಗಿದ್ದು, ಹಣಕ್ಕಾಗಿ ಸುದ್ದಿಗಳನ್ನು ತಿದ್ದಿ, ಬದಲಾಯಿಸುತ್ತಿವೆ. ಇದು ನೈತಿಕ ಮಾದ್ಯಮದ ಸಿದ್ಧಾಂತಗಳ ವಿರುದ್ಧ” ಎಂದು ಅವರು ಹೇಳಿದರು.
ಸೌಜನ್ಯ ಪ್ರಕರಣ: ಧರ್ಮಸ್ಥಳದಲ್ಲಿ ನ್ಯಾಯಕ್ಕಾಗಿ ಹೋರಾಟ
ಮಹೇಶ್ ಶೆಟ್ಟಿ ತಿಮ್ಮರೋಡಿ ಅವರು ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಕುರಿತು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ವಿಶೇಷವಾಗಿ, ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಎಂಬ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತು ಯಾವುದೇ ಪ್ರಮುಖ ಮಾಧ್ಯಮಗಳು ಸುದ್ದಿಯನ್ನೇ ಪ್ರಸಾರ ಮಾಡಿಲ್ಲ ಎಂಬುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು.
“ನಮ್ಮ ಮಾಧ್ಯಮಗಳೇ ಈ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದರೆ, ಸೌಜನ್ಯನಂತಹ ಬಾಲಕಿಯವರಿಗೆ ನ್ಯಾಯ ದೊರಕುವುದು ಹೇಗೆ?” ಎಂದು ಅವರು ಪ್ರಶ್ನಿಸಿದರು.
ಸಂಘಟನೆಯ ಬೆಂಬಲ:
ಸಂಘಟನೆಯ ರಾಜ್ಯಾಧ್ಯಕ್ಷ ಶಶಿಕಾಂತ್ ಕಂಬಳೆ ಅವರು ಈ ಸಂದರ್ಭದಲ್ಲಿ ಮಾತನಾಡಿ, “ನಮ್ಮ ಸಂಘಟನೆ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಮಹೇಶ್ ಶೆಟ್ಟಿ ಅವರ ಪಕ್ಕದಲ್ಲಿ ನಿಲ್ಲುತ್ತದೆ. ಇಂತಹ ಪ್ರಕರಣಗಳಿಗೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ” ಎಂದು ಘೋಷಿಸಿದರು.
ಅವರು ಮುಂದುವರೆದು, “ಮಾಧ್ಯಮಗಳು ಜನತೆಯ ಧ್ವನಿಯಾಗಬೇಕು, ಆದರೆ ಅರ್ಥಲಾಭಕ್ಕಾಗಿ ಯಾರಿಗಾದರೂ ಮಣಿಯುವುದು ಸರಿಯಲ್ಲ. ನಮ್ಮ ಸೌಜನ್ಯ ನ್ಯಾಯಪರ ಹೋರಾಟಕ್ಕೆ ಏನೇ ಅಡೇ ತಡೆಗಳು ಹೆದುರಾದಲ್ಲಿ ಅಂತಹ ಸಮಸ್ಯೆಗಳನ್ನು ಕಾನೂನು ಬದ್ದವಾಗಿ ನಾವು ಹೆದರಿಸಲು ಸಿದ್ದರಿದ್ದೇವೆ, ಅನೇಕ ಹಂತಗಳಲ್ಲಿ ನ್ಯಾಯ ಪರ ಹೋರಾಟ ನಡೆಸಲು ಸಜ್ಜಾಗಿದ್ದೇವೆ” ಎಂದು ರಾಜ್ಯ ಸಂಘಟನಾ ಸಂಚಾಲಕಿಯಾದ ಶ್ರೀ ಮತಿ ಯಶಸ್ವಿನಿ ಬಿ ಯವರು ಬೆಂಬಲ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಲಹಾ ಸಮಿತಿಯ ಅಧ್ಯಕ್ಷರಾದ ಸಂಜಯ್ ಸಾವಂತ್, ರಾಜ್ಯ ಪ್ರದಾನ ಕಾರ್ಯದರ್ಶಿಯಾದ ಮನು ಕುಮಾರ್, ವಿಭಾಗೀಯ ಅಧ್ಯಕ್ಷರಾದ ವಿಜಯ್ ಮುನಿಯಪ್ಪ, ಪ್ರಚಾರ ಸಮಿತಿಯ ರಾಜ್ಯ ಅಧ್ಯಕ್ಷರಾದ ಆರತಿ ಗಿಳಿಯಾರ್,ರಾಮನಗರ ಅದ್ಯಾಕ್ಷರಾದ ಅಭಿಲಾಷ್ ಹಾಗೂ ಇನ್ನು ಹಲವಾರು ಪತ್ರಕರ್ತರು, ಮಾಧ್ಯಮ ಪ್ರೇಮಿಗಳು, ಹಾಗೂ ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಗೆ, ಸಂಘಟನೆಯ ಭವಿಷ್ಯದ ಹೋರಾಟಗಳು ಹಾಗೂ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು.