
ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಪ್ರಜ್ವಲ್ ರೇವಣ್ಣ(Prajwal Revanna) ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕೋಲಾಹಲ ಸೃಷ್ಟಿಸಿದ ಘಟನೆಯಲ್ಲಿ ಹೆಚ್‌ಡಿ ರೇವಣ್ಣ(H D Revanna) ಬಂಧನವಾಗಿದೆ. ಇದರ ಬೆನ್ನಲ್ಲೇ ಮಗ ಪ್ರಜ್ವಲ್ ಕೂಡ ಶರಣಾಗಲು ರೆಡಿಯಾಗಿದ್ದಾರೆ ಎನ್ನಲಾಗಿದೆ.
ಹೌದು, ಅಪ್ಪನ ಅರೆಸ್ಟ್ ಬೆನ್ನಲ್ಲೇ ದುಬೈ(Dubai) ನಲ್ಲಿರುವ ಪ್ರಜ್ವಲ್ ರೇವಣ್ಣ ಮಂಗಳೂರು ವಿಮಾನ ನಿಲ್ದಾಣಕ್ಕೆ(Mangaluru Airport) ಆಗಮಿಸುವ ಸಾಧ್ಯತೆ ಇದೆ. ಇತ್ತ ಎಸ್ಐಟಿ(SIT) ತಂಡ ವಿಮಾನ ನಿಲ್ದಾಣದಲ್ಲೇ ಬಂಧಿಸಲು ತಯಾರಿ ನಡೆಸಿದೆ. ಹೆಚ್‌ಡಿ ರೇವಣ್ಣ ಬಂಧನವಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಕುಸಿದು ಹೋಗಿದ್ದು, ಇನ್ನು ಹೆಚ್ಚು ಸತಾಯಿಸಿದರೆ ಉಳಿಗಾಲವಿಲ್ಲ ಎಂದು ಸೆರೆಂಡರ್ ಆಗುವ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ವಿಡಿಯೋ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರಜ್ವಲ್ ರೇವಣ್ಣ ಹಾಗೂ ಹೆಚ್‌ಡಿ ರೇವಣ್ಣ ಕುಟುಂಬಕ್ಕೆ ಸಂಕಷ್ಟಗಳು ಹೆಚ್ಚಾಗುತ್ತಿದೆ. ರೇವಣ್ಣ ಸಲ್ಲಿಸಿದ ಜಾಮೀನು ಅರ್ಜಿ ಕೂಡ ವಜಾ ಆಗಿದ್ದು, ಬಚಾವ್ ಆಗುವ ದಾರಿಗಳು ಸದ್ಯಕ್ಕೆ ಮುಚ್ಚಿದ್ದು, ಸೆರೆಂಡರ್ ಆಗುವ ಮಾರ್ಗವೊಂದೇ ಉಳಿದಿದೆ ಎನ್ನಲಾಗಿದೆ.