March 14, 2025

ಹಣ ಕಟ್ಟುವ ವಿಚಾರಕ್ಕೆ ಗಲಾಟೆ: ಟೋಲ್ ಸಿಬ್ಬಂದಿಯ ಬಟ್ಟೆ ಬಿಚ್ಚಿಸಿ ವಾಹನ ಸವಾರರಿಂದ ಥಳಿತ.

Spread the love

ಟೋಲ್ ಹಣ ಕಟ್ಟುವ ವಿಚಾರವಾಗಿ ವಾಹನ ಸವಾರರಿಂದ ಟೋಲ್ ಸಿಬ್ಬಂದಿಯ ಬಟ್ಟೆ ಬಿಚ್ಚಿಸಿ ಹಿಗ್ಗಾ ಮುಗ್ಗಾ ಥಳಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನವಯುಗ ಟೋಲ್ ನಲ್ಲಿ ನಡೆದಿದೆ. ನಾವು ಲೋಕಲ್. ನಮ್ಮ ಕಾರುಗಳಿಗೆ ಟೋಲ್ ಹಣ ಕೇಳುತ್ತೀರಾ ಎಂದು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

ನೆಲಮಂಗಲ, ಮೇ 04: ಟೋಲ್ ಹಣ ಕಟ್ಟುವ ವಿಚಾರವಾಗಿ ವಾಹನ ಸವಾರರಿಂದ ಟೋಲ್ ಸಿಬ್ಬಂದಿಯ (Toll staff) ಬಟ್ಟೆ ಬಿಚ್ಚಿಸಿ ಹಿಗ್ಗಾ ಮುಗ್ಗಾ ಥಳಿಸಿರುವಂತಹ (beaten) ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನವಯುಗ ಟೋಲ್ ನಲ್ಲಿ ನಡೆದಿದೆ. ನಾವು ಲೋಕಲ್. ನಮ್ಮ ಕಾರುಗಳಿಗೆ ಟೋಲ್ ಹಣ ಕೇಳುತ್ತೀರಾ ಎಂದು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ತೇಜಸ್, ಶರತ್ ಎಂಬುವವರಿಂದ ಹಲ್ಲೆ ಮಾಡಲಾಗಿದ್ದು, ಇಬ್ಬರನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯ ವಿಡಿಯೋ ಟೋಲ್ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.