
ತುಮಕೂರು: ಬುಧವಾರ ಮರಕ್ಕೆ ನೇಣು ಹಾಕಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅರಕೆರೆಯ ಬಳಿ ನಡೆದಿದೆ.55 ವರ್ಷದ ವೆಂಕಟೇಶ್ ಮೃತ ವ್ಯಕ್ತಿ ಎನ್ನಲಾಗಿದೆ. ವೆಂಕಟೇಶ್ ಅರಕೆರೆಯ ನಿವಾಸಿಯಾಗಿದ್ದು ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎನ್ನಲಾಗಿದೆ.
ಮೂರು ದಿನದಿಂದ ಮನೆಯಿಂದ ಕಾಣೆಯಾಗಿರುವ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಮೂರುದಿನದ ನಂತರ ಬುಧವಾರ ಬೆಳಗ್ಗೆ ಮರಕ್ಕೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ವೆಂಕಟೇಶ್ ಶವವಾಗಿ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ. ವೆಂಕಟೇಶ್ ಸಾವು ಅಲವು ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ ಸಾವಿನ ನಿಕರ ಕಾರಣ ತಿಳಿದು ಬಂದಿಲ್ಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ ಸಾವಿನ ಕಾರಣ ಮುಂದಿನ ತನಿಖೆಯಲ್ಲಿ ತಿಳಿದು ಬರಬೇಕಿದೆ.