March 14, 2025

ಬೆಂಗಳೂರು: ಅಪ್ರಾಪ್ತ ಬಾಲಕನ ಬ್ಲಾಕ್ ಮೇಲ್, ನಾಲ್ವರು ಆರೋಪಿಗಳ ಬಂಧನ.

Spread the love

ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ .

ಬೆಂಗಳೂರು: ಪಬ್ ಜೀ ಯತಂಹ ಗೇಮ್ ಗಳ ಚಟ ಅಂಟಿಸಿಕೊಂಡಿದ್ದ ಅಪ್ರಾಪ್ತ ಬಾಲಕನನ್ನು ಬ್ಲಾಕ್ ಮೇಲ್ ಮಾಡಿ ಹಣ, ಚಿನ್ನಾಭರಣ ಸೇರಿದಂತೆ 41. 50 ಲಕ್ಷ ಮೌಲ್ಯದ ವಸ್ತುಗಳನ್ನು ಪಡೆದಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಂಗಾವತಿಯ ಅರ್ಹಾಳ್ ರಸ್ತೆಯ ಕಾರ್ತಿಕ್ ಕುಮಾರ್ (42) ಸಿಬಿಎಸ್ ವೃತ್ತದ ಸುನೀಲ್ (30) ರಾಜರಾಜೇಶ್ವರಿ ನಗರದ ವೆಮನ್ ಹಾಗೂ ಕೆಂಗೇರಿ ಉಪನಗರದ ವಿವೇಕ್ (19) ಬಂಧಿತ ಆರೋಪಿಗಳು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಬಂಧಿತರ ಪೈಕಿ ಇಬ್ಬರಿಂದ ಚಿನ್ನದ ವಡವೆಗಳನ್ನು ಕರಗಿಸಿದ್ದ 302 ಗ್ರಾಂ ತೂಕದ 2 ಚಿನ್ನದ ಹಟ್ಟಿ ಹಾಗೂ ಮತ್ತಿಬ್ಬರಿಂದ ಚಿನ್ನವನ್ನು ಮಾರಾಟ ಮಾಡಿ ಗಳಿಸಿದ್ದ 23.50 ಲಕ್ಷ ನಗದು ಸೇರಿ 41.50 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದರು. ಈ ಸಂಬಂಧ ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ನಿವಾಸಿಯೊಬ್ಬರು ದಾಖಲಿಸಿದ್ದ ದೂರನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿರುವುದಾಗಿ ಅವರು ತಿಳಿಸಿದರು.