March 14, 2025

ಸಾವಿರಾರು ಮಹಿಳೆಯರು ದೇಶದ ಹೆಣ್ಮಕ್ಕಳಲ್ವ!?

Spread the love

ಬೆಂಗಳೂರು: ನಾರಿ ಶಕ್ತಿ ಅಂತ ಹೇಳ್ತಾರೆ. ಆದರೆ ಸಾವಿರಾರು ಮಹಿಳೆಯರು ದೇಶದ ಹೆಣ್ಮಕ್ಕಳಲ್ವೇ? ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ಸೌಮ್ಯ ರೆಡ್ಡಿ ಪ್ರಶ್ನಿಸಿದ್ದಾರೆ.ಅನೇಕ ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ದೌರ್ಜನ್ಯವೆಸಗಿರುವ ಸಂಸದ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ, ಮಹಿಳಾ ಕಾಂಗ್ರೆಸ್ ಮುಖಂಡರ ಜೊತೆ ಸುದ್ದಿಗೋಷ್ಠಿ ನಡೆಸಿರುವ ಕುರಿತು ಸಾಮಾಜಿಕ ಜಾಲತಾನದಲ್ಲಿ ಪೋಸ್ಟ್‌ ಮಾಡಿರುವ ಅವರು ಬೇಟಿ ಬಚಾವ್ ಬೇಟಿ ಪಡಾವ್ ಅಂತಾ ಮಾನ್ಯ ಪ್ರಧಾನಿ ಮೋದಿಯವರು 10 ವರ್ಷದಿಂದ ಹೇಳ್ತಿದ್ದಾರೆ. ಎನ್.ಡಿ.ಎ ಅಭ್ಯರ್ಥಿಯೇ ಇದನ್ನ ಹೊರತಂದಿದ್ದಾರೆ. ಪ್ರಧಾನಿ ಮೋದಿ, ವಿಜಯೇಂದ್ರಗೆ ಇದರ ಮಾಹಿತಿ ಇತ್ತು. ಆದರೂ ಇಂತವರಿಗೆ ಮತ್ತೆ ಟಿಕೆಟ್ ಕೊಟ್ಟಿದ್ದಾರೆ. ಇದರಿಂದ ರಾಜ್ಯದ ಮಹಿಳೆಯರು ನೊಂದಿದ್ದೇವೆ. ದೇಶದಲ್ಲಿ ಏನೇನಾಗ್ತಿದೆ ಅಂತ ನೋಡ್ತಿದ್ದೇವೆ. ನಾರಿ ಶಕ್ತಿ ಅಂತ ಹೇಳ್ತಾರೆ. ಆದರೆ ಸಾವಿರಾರು ಮಹಿಳೆಯರು ದೇಶದ ಹೆಣ್ಮಕ್ಕಳಲ್ವೇ? ಅವರು ಏನು ಪಾಪ ಮಾಡಿದ್ರು? ಇಂತಹ ವ್ಯಕ್ತಿಗೆ ಮತ್ತೊಮ್ಮೆ ಟಿಕೆಟ್ ಹೇಗೆ ಕೊಟ್ರಿ? ಮಹಿಳೆಯರಿಗೆ ಎಲ್ಲಿ‌ ನ್ಯಾಯ ಸಿಗ್ತಿದೆ? ಇದಕ್ಕೆ ಬಿಜೆಪಿ ಮತ್ತು ಜೆಡಿ(ಎಸ್) ನಾಯಕರು ಉತ್ತರಿಸಬೇಕು ಎಂದಿದ್ದಾರೆ.