March 14, 2025

ಸಾಲ ಮರುಪಾವತಿ ಚೆಕ್‌ ಬೌನ್ಸ್‌ ಕೇಸ್‌: 4 ತಿಂಗಳ ಜೈಲು ಶಿಕ್ಷೆ, 4 ಲಕ್ಷ ರೂ ದಂಡ ಆದೇಶ ಎತ್ತಿಹಿಡಿದ ಹೈಕೋರ್ಟ್‌

Spread the love

ಹೈಲೈಟ್ಸ್‌:

  1. ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಕೆಳ ಹಂತದ ನ್ಯಾಯಾಲಯದ ತೀರ್ಪನನ್ನು ಎತ್ತಿ ಹಿಡಿದ ಹೈಕೋರ್ಟ್‌.

2. ಚೆಕ್‌ ಬೌನ್ಸ್‌ಗೆ ನಾಲ್ಕು ತಿಂಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತ್ತು.

3. ಜೈಲು ಶಿಕ್ಷೆ ಮಾತ್ರವಲ್ಲದೇ ಲಕ್ಷಾಂತರ ರೂ ದಂಡ ವಿಧಿಸಿದೆ.

ದಾವಣಗೆರೆ: ಚೆಕ್‌ ಬೌನ್ಸ್‌ ಪ್ರಕರಣವೊಂದರಲ್ಲಿ ಇಲ್ಲಿನ 1ನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ ವಿಧಿಸಿದ್ದ 4 ತಿಂಗಳ ಸಾದಾ ಕಾರಾಧಿಗೃಹ ಶಿಕ್ಷೆ ಹಾಗೂ 4.05 ಲಕ್ಷ ರೂ. ದಂಡ ಪಾವತಿಸುವ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದೆ.

ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ಮಲೆಬೆನ್ನೂರು ಸರಕಾರಿ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕಿ ವನಜಾಕ್ಷಿದೇವಿ ವಸಂತ ಕುಮಾರ್‌ ಎಂಬುವರು ಭಾನುವಳ್ಳಿ ಗ್ರಾಮದ ಮಲ್ಲಿನಾಥ ಎ.ಎಸ್‌. ಎಂಬುವರಿಂದ ಪಡೆದಿದ್ದ ಸಾಲ ಮರುಪಾವತಿಗಾಗಿ ನೀಡಿದ್ದ 4 ಲಕ್ಷ ಮೊತ್ತದ ಚೆಕ್‌ ಬೌನ್ಸ್‌ ಆಗಿತ್ತು. ಈ ಕುರಿತು ಮಲ್ಲಿನಾಥ ನ್ಯಾಯಾಲಯದ ಮೊರೆ ಹೋಗಿದ್ದರು.

ಹರಿಹರದ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಆರೋಪಿತರು ಜಿಲ್ಲಾನ್ಯಾಯಾಲಯ ಮತ್ತು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿ, ಅಂತಿಮವಾಗಿ ಹೈಕೋರ್ಟ್‌ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ. ದಂಡದ ಮೊತ್ತ ಪಾವತಿಸದಿದ್ದರೆ 2 ತಿಂಗಳ ಹೆಚ್ಚುವರಿ ಕಾರಾಗೃಹ ಶಿಕ್ಷೆ ವಿಧಿಸಿ ಹೈಕೋರ್ಟ್‌ ತೀರ್ಪು ನೀಡಿದೆ ಎಂದು ಮಲ್ಲಿನಾಥರ ಪರ ವಕೀಲರಾದ ನಾಗರಾಜ್‌ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.