March 14, 2025

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಜಗಳ, ಬಾರ್‌ನಲ್ಲಿ ಸ್ನೇಹಿತನಿಗೆ ಬೆಂಕಿ ಹಚ್ಚಿದ ಆರೋಪಿಗಳು; ಇಬ್ಬರ ಬಂಧನ

Spread the love

ಬೆಂಗಳೂರು: ಆನೇಕಲ್‌ನ ಬಾರ್‌ವೊಂದರಲ್ಲಿ ಸ್ನೇಹಿತನಿಗೆ ಮದ್ಯ ಕುಡಿಸಿ ಬೆಂಕಿ ಹಚ್ಚಿದ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಸಂತ್ರಸ್ತನನ್ನು ಕೆ ನಾಗೇಶ್ ಎಂದು ಗುರುತಿಸಲಾಗಿದ್ದು, ಬಾರ್‌ನಲ್ಲಿ ಮದ್ಯಪಾನ ಮಾಡುವಾಗ ಕ್ಷುಲ್ಲಕ ವಿಷಯಕ್ಕೆ ತನ್ನ ಮೂವರು ಸ್ನೇಹಿತರೊಂದಿಗೆ ಜಗಳವಾಡಿದ್ದಾನೆ ಎಂದು ವರದಿಯಾಗಿದೆ.

ಮಾತಿನ ಚಕಮಕಿಯಲ್ಲಿ ಆರೋಪಿಗಳು ನಾಗೇಶ್ ಮೇಲೆ ಟೇಬಲ್ ಮೇಲಿದ್ದ ಮದ್ಯ ಎರಚಿ, ಸಿಗರೇಟಿನಿಂದ ಬೆಂಕಿ ಹಚ್ಚಿದ್ದಾರೆ. ಬಾರ್‌ಗೆ ಬೆಂಕಿ ಹೊತ್ತಿಕೊಳ್ಳುವ ಮುನ್ನ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈಮಧ್ಯೆ, ನಾಗೇಶ್ ಅವರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರಿಗೆ ಶೇ 30 ರಷ್ಟು ಸುಟ್ಟ ಗಾಯಗಳಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆನೇಕಲ್‌ನ ಮುತ್ತಘಟ್ಟ ಗ್ರಾಮದ ನಿವಾಸಿಯಾಗಿರುವ ನಾಗೇಶ್ ಚಾಲಕನಾಗಿದ್ದಾರೆ. ಏಪ್ರಿಲ್ 22 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಆನೇಕಲ್-ಹೊಸೂರು ರಸ್ತೆಯ ಸಂಜಯ್ ಬಾರ್‌ನಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿಗಳನ್ನು ಮಲ್ಲಿಕ್, ವೆಂಕಟಸ್ವಾಮಿ ಮತ್ತು ಮುನಿರಾಜು ಎಂದು ಗುರುತಿಸಲಾಗಿದೆ. ವೆಂಕಟಸ್ವಾಮಿ ಮತ್ತು ಮುನಿರಾಜು ಅವರನ್ನು ಗುರುವಾರ ಬಂಧಿಸಲಾಗಿದ್ದು, ಮಲ್ಲಿಕ್ ತಲೆಮರೆಸಿಕೊಂಡಿದ್ದಾನೆ. ಈ ಮೂವರು ಆರೋಪಿಗಳು ಆನೇಕಲ್ ನಿವಾಸಿಗಲಾಗಿದ್ದಾರೆ