March 14, 2025

30 ವರ್ಷದಿಂದ ತೆರವುಗೊಳಿಸಲಾಗದ ಸರ್ಕಾರಿ ಜಾಗ ತೆರವು: ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ ಇವರಿಗೆ ಗ್ರಾಮಸ್ಥರಿಂದ ಕೃತಜ್ಞತೆ,!?

Spread the love


ಉಡುಪಿ ಜಿಲ್ಲೆ, :

ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರು  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಚ್ಚುರು ಗ್ರಾಮದಲ್ಲಿ ಸುಮಾರು 30 ವರ್ಷಗಳಿಂದ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡ ಭೂಗಳ್ಳರು ಸಾರ್ವಜನಿಕರಿಗೆ ರಸ್ತೆ ಸಂಪರ್ಕ ಕಡಿದು ಪರದಾಡುವ ಪರಿಸ್ಥಿತಿಯನ್ನೇ ನಿರ್ಮಿಸಿದ್ದರು. ಈ ಸಮಸ್ಯೆಯಿಂದ ವಯಸ್ಕರು, ವಿದ್ಯಾರ್ಥಿಗಳು ಮತ್ತು ಗರ್ಭಿಣಿಯರು ಹೆಚ್ಚಾಗಿ ಸಂಕಷ್ಟ ಅನುಭವಿಸುತ್ತಿದ್ದರು. ತುರ್ತು ಅವಸ್ಥೆಯಲ್ಲಿ, ವಿಶೇಷವಾಗಿ ಅನಾರೋಗ್ಯದ ಸಂದರ್ಭಗಳಲ್ಲಿ, ಅಂಬುಲೆನ್ಸ್ ಸೇರಿ ತುರ್ತು ವಾಹನಗಳು ಸ್ಥಳಕ್ಕೆ ತಲುಪುವಂತಿಲ್ಲದೇ ಹಲವು ಬಾರಿ ಜೀವ ಹಾನಿಯ ಅಪಾಯ ಎದುರಾಗಿತ್ತು.



ಸಾರ್ವಜನಿಕರು ಈ ಬಗ್ಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಭಾವಶಾಲಿ ಕ್ರಮ ಕೈಗೊಳ್ಳಲಾಗಿರಲಿಲ್ಲ. ಕೊನೆಗೂ, ಜನಸ್ಪಂದನ ಸಭೆಯಲ್ಲಿ ಈ ಸಮಸ್ಯೆ ಪ್ರಸ್ತಾಪವಾದಾಗ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಭೂಗಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮುಂದಾಯಿತು. ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಗೊಂಡಿತು.



ಇದರ ಭಾಗವಾಗಿ, ತಹಸೀಲ್ದಾರ್ ಶ್ರೀಕಾಂತ್ S ಹೆಗ್ದೆ ಅವರ ಮಾರ್ಗದರ್ಶನದಲ್ಲಿ ಸಂಬಂಧಿತ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಸಹಾಯದಿಂದ ಅಕ್ರಮವಾಗಿ ಒತ್ತುವರಿ ಮಾಡಿದ್ದ ಜಾಗ ತೆರವುಗೊಳಿಸಲಾಯಿತು. ಈ ವೇಳೆ ASI ಶಾಂತರಾಜ್, HC ಸಬಿತ, ಪಿಸೋ ವಂದನಾ, ಬಿಲ್ ಕಲೆಕ್ಷರ್ ಸಂತೋಷ್, ಸರ್ವೇಯರ್ ಚಂದ್ರುಶೇಖರ್, ಆನಂದ್ ಮತ್ತು RI ಮಂಜುನಾಥ ಬಿಲ್ಲವ ಉಪಸ್ಥಿತರಿದ್ದು, ಕಾರ್ಯಾಚರಣೆಯಲ್ಲಿ ಸಹಕರಿಸಿದರು.


ಈ ಪವಿತ್ರ ಕಾರ್ಯಾಚರಣೆಯ ಮೂಲಕ, ಕಚ್ಚುರು ಗ್ರಾಮಸ್ಥರಿಗೆ ಕಾದಿದ್ದ ಬಹುಕಾಲದ ಸಮಸ್ಯೆಗೆ ತೆರೆ ಬಿದ್ದಿದ್ದು, ಸಾರ್ವಜನಿಕರು ತಹಸೀಲ್ದಾರ್ ಶ್ರೀಕಾಂತ್ ಹೆಗಡೆ ಅವರ ಕಾರ್ಯನಿಷ್ಠೆಗೆ ಧನ್ಯವಾದಗಳನ್ನು ಅರ್ಪಿಸಿದರು. ಇಂತಹ ಅಧಿಕಾರಿಗಳನ್ನು ನೀಡಿರುವ ಜಿಲ್ಲಾದಿಕಾರಿಗಳಿಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದರು… ✍🏻

ವರದಿ :ಆರತಿ ಗಿಳಿಯಾರ್

ಉಡುಪಿ