
ಉಡುಪಿ :
ಕುಂದಾಪುರ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ಭವನದಲ್ಲಿ ರಾಜೇಶ್ ಕರ್ಕೇರ ಕೆಳಾರ್ಕಳ ಬೆಟ್ಟು ಇವರ ಸಲಹೆಯ ಮೇರೆಗೆ ಭೀಮವಾದ ದಲಿತ ಸಂಘರ್ಷ ಸಮಿತಿಯ ಪೂರ್ವಭಾವಿ ಸಭೆ ನಡೆಯಿತು. ಸಂಘಟನೆಯ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಈ ಸಭೆ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಸಂಘಟನೆಯ ಪ್ರಮುಖರು ಭಾಗವಹಿಸಿ, ಸಮುದಾಯದ ಹಿತಾಸಕ್ತಿಯ ವಿಷಯಗಳನ್ನು ಚರ್ಚಿಸಿದರು. ಸಂಘಟನೆಯ ಶಕ್ತಿಯನ್ನು ಮತ್ತಷ್ಟು ಬಲಪಡಿಸುವುದು, ದಲಿತ ಸಮುದಾಯದ ಸಮಸ್ಯೆಗಳಿಗೆ ಸರ್ಕಾರದ ಗಮನಸೆಳೆಯುವುದು, ಹಾಗೂ ಹಕ್ಕುಗಳಿಗಾಗಿ ಹೋರಾಟವನ್ನು ಇನ್ನಷ್ಟು ಪ್ರಭಾವಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಿತು.
ಈ ಸಭೆಯಲ್ಲಿ ಅಂಬರೀಷ್, ಕಿರಣ್ ಗೋವಿಂದ, ನಾಗೇಶ್, ಶ್ರೀಧರ, ಸಂದೀಪ್, ಚಂದ್ರ A, ಅನಿಲ, ಚಂದ್ರ ಕೆ, ಸಂತೋಷ, ಸುದರ್ಶನ್, ಶ್ರೀಕಾಂತ್, ಶೇಕರ, ಸುದೀಪ್, ನಾಗರಾಜ್, ಭಾರತ ಸೇರಿದಂತೆ ಅನೇಕರು ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮುಂದಿನ ಹಂತದಲ್ಲಿ ಸಂಘಟನೆ ನಡೆಸಬೇಕಾದ ನಿರ್ಧಾರಗಳ ಕುರಿತು ಸ್ಪಷ್ಟತೆ ನೀಡಲಾಯಿತು. ದಲಿತ ಸಮುದಾಯದ ಹಕ್ಕುಗಳಿಗಾಗಿ ಸಂಘಟನೆಯು ನಿರಂತರವಾಗಿ ಹೋರಾಟ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ.