
ಬೆಂಗಳೂರು: ಬೊಮ್ಮನಹಳ್ಳಿಯಲ್ಲಿ ಮಾದರಿ ಪೊಲೀಸ್ ವ್ಯವಸ್ಥೆಗೆ ಕಲೆ ತಂದ ಘಟನೆ ಬೆಳಕಿಗೆ ಬಂದಿದೆ. 17 ವರ್ಷದ ಅತ್ಯಾಚಾರ ಸಂತ್ರಸ್ತೆಯೊಬ್ಬಳು ದೂರು ನೀಡಲು ಠಾಣೆಗೆ ಬಂದಾಗ, ನೆರವು ನೀಡುವ ನೆಪದಲ್ಲಿ ಪೊಲೀಸರೊಬ್ಬರು ಮತ್ತು ಸಂತ್ರಸ್ತೆಯ ಸ್ನೇಹಿತನೊಬ್ಬರು ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಹೊರಸಲಾಗಿದೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇಲೆ, ಬೊಮ್ಮನಹಳ್ಳಿ ಠಾಣೆಯ ಕಾನ್ಸೆಬಲ್ ಅರುಣ್ ತೊಣೆಪ ಮತ್ತು ಸಂತ್ರಸ್ತೆಯ ಸ್ನೇಹಿತನನ್ನು ಬಂಧಿಸಲಾಗಿದೆ. ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಘಟನೆ ಪೊಲೀಸ್ ಇಲಾಖೆಯ ನೈತಿಕತೆ ಮತ್ತು ವಿಶ್ವಾಸಾರ್ಹತೆಗೆ ಭಾರೀ ಆಘಾತ ನೀಡಿದ್ದು, ಪ್ರಕರಣದ ತನಿಖೆ ತೀವ್ರವಾಗಿ ಮುಂದುವರಿಸಲಾಗುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆಯು ಮತ್ತು ಕುಟುಂಬಕ್ಕೆ ಮನಃಪೂರ್ವಕ ನೆರವು ಒದಗಿಸಲಾಗುತ್ತಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಶಿಘ್ರ ಕ್ರಮ ಕೈಗೊಳ್ಳಲು ಭರವಸೆ ನೀಡಿದೆ.