March 14, 2025

ಪಾದಾಚಾರಿಗೆ ಟಿಪ್ಪರ್ ಲಾರಿ ಡಿಕ್ಕಿ: ಗ್ರಾ.ಪಂ. ಅಧ್ಯಕ್ಷೆಯ ಸ್ಥಳದಲ್ಲೇ ದುರ್ಮರಣ.!?

Spread the love



ಬೆಳೂರು, ಜುಲೈ 22: ಹನಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಗಮ್ಮ (58) ಅವರು ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನೆಹರು ನಗರದ ಬಳಿಯಲ್ಲಿ ಸಂಭವಿಸಿದೆ.

ಮಲ್ಲಿಗಮ್ಮ ಅವರು ಬ್ಯಾಂಕಿನ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. KA-46-8651 ನಂಬರ್‌ನ ಟಿಪ್ಪರ್ ಲಾರಿ ವೇಗವಾಗಿ ಹಿಂಬದಿಯಿಂದ ಬಂದು ಅವರ ಮೇಲೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಮಲ್ಲಿಗಮ್ಮ ತೀವ್ರ ಗಾಯಗೊಂಡು ತಕ್ಷಣವೇ ಸಾವನ್ನಪ್ಪಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳೀಯರು ಸಹಾಯಕ್ಕೆ ಧಾವಿಸಿದರು, ಆದರೆ ಅವರ ಪ್ರಾಣ ಉಳಿಸಲಾಗಲಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಟಿಪ್ಪರ್ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಈ ದುರ್ಘಟನೆಯಿಂದ ಗ್ರಾಮಸ್ಥರಲ್ಲಿ ಶೋಕಾಚ್ಛಾದನಿಯ ವಾತಾವರಣ ನಿರ್ಮಾಣವಾಗಿದೆ. ಮಲ್ಲಿಗಮ್ಮ ಅವರು ಜನಪ್ರಿಯ ನಾಯಕಿಯಾಗಿದ್ದು, ಅವರ ಅಗಲುವಿಕೆ ಗ್ರಾಮಸ್ಥರಿಗೆ ಆಘಾತ ತಂದಿದೆ. ಬೆಳೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.