
ಬೆಂಗಳೂರು ಗ್ರಾಮಾಂತರ :
ನೆನ್ನೆ ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ 10ನೇ ಬೀಟ್ ಸಿಬ್ಬಂದಿ ಶಿವಾನಂದ ತೆಗ್ಗಿ ರವರು ತಮ್ಮ ವ್ಯಾಪ್ತಿಯಲ್ಲಿ ಗಸ್ತು ನಡೆಸಿದ ನಂತರ, ಪಿಎಸ್ಐ ನಂಜಯ್ಯ ರವರ ನೇತೃತ್ವದಲ್ಲಿ ಹಿಪ್ಪೆ ಆಂಜನೇಯಸ್ವಾಮಿ ಲೇಔಟ್ ನಲ್ಲಿ ಬೀಟ್ ಸಭೆ ಆಯೋಜಿಸಲಾಯಿತು.
ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಿ ತಮ್ಮ ಬೀಟ್ ವ್ಯಾಪ್ತಿಯ ಕುಂದು ಕೊರತೆಗಳ ಬಗ್ಗೆ ಮಾತನಾಡುವ ಅವಕಾಶ ಪಡೆದರು. ಪಿಎಸ್ಐ ನಂಜಯ್ಯ ರವರು ಅಪರಾಧ ಚಟುವಟಿಕೆಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ತಕ್ಷಣ ಮಾಹಿತಿ ನೀಡುವ ಅಗತ್ಯತೆ ಹಾಗೂ ಸಾರ್ವಜನಿಕ ಭದ್ರತೆ ಕುರಿತು ಅರಿವು ಮೂಡಿಸಿದರು.
ಇದಲ್ಲದೆ, ತುರ್ತು ಪರಿಸ್ಥಿತಿಯಲ್ಲಿ 112 ಗೆ ಕರೆ ಮಾಡುವ ಮೂಲಕ ತಕ್ಷಣದ ಪೊಲೀಸ್ ಸಹಾಯ ಪಡೆಯಬಹುದಾಗಿದೆ ಎಂಬ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಯಿತು. ಸ್ಥಳೀಯರು ಈ ಸಭೆಗೆ ಉತ್ತಮ ಸ್ಪಂದನೆ ನೀಡಿದ್ದು, ತಮ್ಮ ಪ್ರದೇಶದ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸರ ಜತೆ ಉತ್ತಮ ಸಂಪರ್ಕ ಬೆಳೆಸಲು ಈ ಬಗೆಯ ಸಭೆಗಳು ಉಪಯುಕ್ತವಾಗಿವೆ ಎಂದು ಅಭಿಪ್ರಾಯಪಟ್ಟರು.