
ಹಾಸನ ಜಿಲ್ಲೆ :
ಹಾಸನದಲ್ಲಿ ರೌಡಿ ಶೀಟರ್ ಮನು ಅಟ್ಟಹಾಸ ಮೆರೆದ ಘಟನೆ ನಡೆದಿದೆ. ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಬಳಿ ನಡೆದ ಈ ಘಟನೆಯಲ್ಲಿ, ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಅನ್ನು ಅಡ್ಡಗಟ್ಟಿದ ಮನು, ಲಾಂಗ್ ನಿಂದ ದಾಳಿ ನಡೆಸಿ ಭೀತಿಗೆ ಕಾರಣನಾದ.
ಈ ಕುರಿತು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ಮನು ದಾಳಿ ಮಾಡಲು ಮುಂದಾದನು. ಆತ್ಮರಕ್ಷಣಾರ್ಥವಾಗಿ ಹಾಸನ ನಗರ ಠಾಣೆ ಇನ್ಸ್‌ಪೆಕ್ಟರ್ ಮೋಹನ್ ಕೃಷ್ಣ ಅವರು ಗುಂಡು ಹಾರಿಸಿದ್ದು, ಮನು ಕಾಲಿಗೆ ಗುಂಡು ತಗುಲಿ ಕುಸಿದನು.
ಮನು ವಿರುದ್ಧ ಮೂರು ಕೊಲೆ ಯತ್ನ ಮತ್ತು ಒಂದು ಕೊಲೆ ಪ್ರಕರಣ ದಾಖಲಾಗಿದ್ದು, ಈ ಹಿಂದೆ ಹಲವಾರು ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿದ್ದಾನೆ. ಗಾಯಗೊಂಡಿದ್ದ ಮನುಗೆ ತಕ್ಷಣವೇ ಚಿಕಿತ್ಸೆ ನೀಡಲಾಯಿತ್ತಾದರೂ, ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಘಟನೆಯಿಂದ ಹಾಸನದಲ್ಲಿ ಭಾರೀ ಕುತೂಹಲ ಉಂಟಾಗಿದ್ದು, ಪೊಲೀಸರು ಹೆಚ್ಚಿನ ಸುರಕ್ಷತೆ ಕೈಗೊಂಡಿದ್ದಾರೆ. ಈ ಘಟನೆ ಸಂಬಂಧ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.