
ಉಡುಪಿ ಜಿಲ್ಲೆ :
ಕುಂದಾಪುರ ತಾಲ್ಲೂಕಿನ ಹೊಂಬಾಡಿ-ಮುಂಡಾಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಎಡಾಡಿ-ಮತ್ಯಾಡಿ ಪ್ರದೇಶದಲ್ಲಿ ಸುಜ್ಞಾನ ಎಜುಕೇಷನ್ ಟ್ರಸ್ಟ್ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿರುವ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕಟ್ಟಡವು ಸಂಪೂರ್ಣವಾಗಿ ಕಾನೂನು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದ್ದು, WP-18356/24 ಪ್ರಕರಣವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಾಗಿದೆ. ಪ್ರಸ್ತುತ, ಈ ಪ್ರಕರಣ ನ್ಯಾಯಾಲಯದ ಪರಿಶೀಲನೆಯಲ್ಲಿದೆ.

ಅಧಿಕಾರಿಗಳ ಅವಗಣನೆ
ಸಮಾಜಿಕ ಕಾರ್ಯಕರ್ತ ಸಚಿನ್ ಶ್ರೀಯಾನ್, ಅನಧಿಕೃತ ಕಟ್ಟಡ ನಿರ್ಮಾಣದ ಬಗ್ಗೆ ಕುಂದಾಪುರ ತಹಸೀಲ್ದಾರ್, ಉಡುಪಿ DDPU (ಪದವಿಪೂರ್ವ ಶಿಕ್ಷಣ ಇಲಾಖೆ), ಹೊಂಬಾಡಿ-ಮುಂಡಾಡಿ ಗ್ರಾಮಪಂಚಾಯತ್, PWD (ಸಾರ್ವಜನಿಕ ನಿರ್ವಹಣಾ ಇಲಾಖೆ), BEO (ಬ್ಲಾಕ್ ಎಜುಕೇಷನ್ ಆಫೀಸರ್) ಕುಂದಾಪುರ, ಕೋಟ ಪೊಲೀಸ್ ಠಾಣೆ ಸೇರಿದಂತೆ ಹಲವು ಇಲಾಖೆಗಳಿಗೂ ದೂರು ನೀಡಿದ್ದಾರೆ. ಆದರೆ ಈ ತನಕ ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳದಿರುವುದು ಸರಕಾರಿ ಅಧಿಕಾರಿಗಳ ಅಲಕ್ಷ್ಯ ಮತ್ತು ಬೇಜವಾಬ್ದಾರಿತನವನ್ನು ತೋರಿಸುತ್ತದೆ.
ಅನಧಿಕೃತ ಕಟ್ಟಡದಲ್ಲಿ ಶಿಕ್ಷಣ ವ್ಯವಸ್ಥೆ ಆರಂಭವಾದರೆ, ಸ್ಥಳೀಯ ವಿದ್ಯಾರ್ಥಿಗಳ ಭದ್ರತೆ ಮತ್ತು ಶಿಕ್ಷಣದ ಗುಣಮಟ್ಟದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಹಾಗೆಯೇ, ಕಾಲೇಜು ಪ್ರಾರಂಭಕ್ಕೂ ಮುನ್ನವೇ “ಜೆಇಇ/ನೀಟ್‌ನಲ್ಲಿ ಪ್ರಥಮ” ಎಂಬ ನಾಮಫಲಕವನ್ನು ಅಳವಡಿಸಿರುವುದು ಪೋಷಕರನ್ನು ಮತ್ತು ಸಾರ್ವಜನಿಕರನ್ನು ಮೋಸಗೊಳಿಸುವ ಹುನ್ನಾರವೆಂದು ಶಂಕಿಸಲಾಗಿದೆ
ಈ ಅನಧಿಕೃತ ನಿರ್ಮಾಣದ ಬಗ್ಗೆ VVC TV ಮಾಧ್ಯಮದ ಮುಖಾಂತರ ಸಾರ್ವಜನಿಕ ಜಾಗೃತಿ ಮೂಡಿಸಲು ಸಚಿನ್ ಶ್ರೀಯಾನ್ ಮನವಿ ಮಾಡಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಹಾಗೂ ಕಾನೂನು ಹೋರಾಟಕ್ಕೆ ಬೆಂಬಲ ನೀಡಲು ಮುಂದಾಗಬೇಕು ಎಂಬ ಮನವಿ ವ್ಯಕ್ತವಾಗಿದೆ.
ವರದಿ : ಆರತಿ ಗಿಳಿಯಾರ್
8951345631