March 14, 2025

ಉಡುಪಿ ಜಿಲ್ಲೆಯಲ್ಲಿ ದಲಿತ ಪತ್ರಕರ್ತೆಯ ಕುಟುಂಬದ ಮೇಲೆ ಹಲ್ಲೆ: ಎಚ್ ಸಿ ಮಹದೇವಪ್ಪ ಸಚಿವರಿಗೆ ಮನವಿ..

Spread the love


ಉಡುಪಿ ಜಿಲ್ಲೆಯ ದಲಿತ ಪತ್ರಕರ್ತೆಯ ಕುಟುಂಬ ಸದಸ್ಯರ ಮೇಲೆ ನಡೆದ ಮರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ, ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ಸಂಘವು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಎಚ್ ಸಿ ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ,ಕಾರ್ಯನಿರತ ಪತ್ರಕರ್ತರ, ಸಂಪಾದಕರ ಹಾಗೂ ವಾರದಿಗಾರರ  ಸಂಘದ ರಾಜ್ಯಧ್ಯಕ್ಷರಾದ ಶಶಿಕಾಂತ್ ಕಾಂಬ್ಳೆ, ಗೌರವಾಧ್ಯಕ್ಷರಾದ ಯಶಶ್ವಿನಿ ಬಿ,ಸಲಹಾ ಸಮಿತಿ ಅಧ್ಯಕ್ಷರಾದ ಸಂಜಯ್ ಸಾವಂತ್, ಬೆಂಗಳೂರು ವಿಭಾಗೀಯ ಅಧ್ಯಕ್ಷರಾದ ವಿಜಯ್ ಮುನಿಯಪ್ಪ , ಮೈಸೂರು ಜಿಲ್ಲೆ ಅಧ್ಯಕ್ಷರಾದ ಕೀರ್ತಿಕೇಶ್ವರ, ರಾಮನಗರ ಜಿಲ್ಲೆ ಅಧ್ಯಕ್ಷರಾದ ಅಭಿಲಾಷ್ ಮತ್ತು ಹಲವಾರು ಇತರ ನಾಯಕರು ಸಹ ಉಪಸ್ಥಿತರಿದ್ದರು.

ಪತ್ರಕರ್ತರ ಸಂಘವು, ದಲಿತ ಸಮುದಾಯದ ಸದಸ್ಯರಿಗೆ ವಿಶೇಷ ರಕ್ಷಣೆಯನ್ನು ನೀಡಲು ಹಾಗೂ ಅವರ ಮೇಲೆ ನಡೆಯುತ್ತಿರುವ ಹಲ್ಲೆಗಳು ಮತ್ತು ಹಿಂಸಾಚಾರವನ್ನು ತಡೆಯಲು ಸರ್ಕಾರದ ನಿಷ್ಠಾವಂತ ಕ್ರಮಗಳನ್ನು ಒತ್ತಾಯಿಸಿದೆ. “ಇಂತಹ ದೌರ್ಜನ್ಯಗಳನ್ನು ತಡೆಯಲು ಅಧಿಕಾರಿಗಳು ಮತ್ತು ಸರ್ಕಾರ ಶೀಘ್ರಗತಿಯಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ಅವರು ಮನವಿ ಮಾಡಿದ್ದಾರೆ.

ಈ ಹಲ್ಲೆ ರಾಜ್ಯದಲ್ಲಿ ದೊಡ್ಡ ಆತಂಕವನ್ನು ಹುಟ್ಟುಹಾಕಿದ್ದು, ಪತ್ರಕರ್ತರು ಮತ್ತು ದಲಿತ ಸಮುದಾಯದ ರಕ್ಷಣೆಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತವಾಗಿದೆ.