March 14, 2025

ಉಡುಪಿ ಜಿಲ್ಲೆಯ ಇರಿಯಡಕ ಠಾಣಾ ಸಿಬ್ಬಂದಿಯ ಹಲ್ಲೆಯಿಂದಾಗಿ ದಲಿತ ವ್ಯಕ್ತಿಯಕೈಗೆ ಇಂದು ಮತ್ತೊಮ್ಮೆ ಶಸ್ತ್ರಚಿಕಿತ್ಸೆ…….!?

Spread the love



ಉಡುಪಿ :

ದಿನಾಂಕ 23.01.25 ರಂದು ಬೆಳ್ಳಂಪಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ  ಫಿಶ್ ಫ್ಯಾಕ್ಟರಿ ಹೋಗುವ ದಾರಿಯ ಹತ್ತಿರ ನಿಂತಿದ್ದ ಒಬ್ಬ ಅಮಾಯಕ ದಲಿತ ವ್ಯಕ್ತಿಯನ್ನ ಅವನ ಮೇಲೆ ಪೊಲೀಸ್ ಠಾಣೆಯಲ್ಲಿ ಯಾವ ದೂರು ಮತ್ತು ಪ್ರಕರಣ ಕೂಡ ಇಲ್ಲದಿದ್ದರೂ ವ್ಯಕ್ತಿಯನ್ನು ಕಾರಣವೇ ಇಲ್ಲದೆ ಹಿರಿಯಡಕ ಪೊಲೀಸ್ ಠಾಣೆಯ PSI ಸಿಬ್ಬಂದಿಗಳು ಮನುಷತ್ವನೇ ಇಲ್ಲದೆ ಆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ .

ದಲಿತರ ಮೇಲೆ ಕಾಳಜಿ ವಹಿಸದೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಳ್ಳದೆ ಅಧಿಕಾರದ ಮತ್ತಿನಲ್ಲಿ, ಅಧಿಕಾರದ ಕುರ್ಚಿಯಲ್ಲಿ ಕೂತು ದಲಿತರ ಮೇಲೆ ದೌರ್ಜನ್ಯವಾಗುತ್ತಿರುವುದನ್ನು ನೋಡಿ ಚೆಲ್ಲಾಟವಾಡುತ್ತಿರುವದನ್ನು ಕಂಡರೆ ವಿಪರ್ಯಾಸವೆನ್ನಿಸುತ್ತಿದೆ.

ಮಾತೆತ್ತಿದರೆ ನಾವು ದಲಿತರು, ನಾವು ಆ ಸಂಘಟನೆಯವರು ಈ ಸಂಘಟನೆಯವರು ಎಂದು ಸಣ್ಣ ಪುಟ್ಟ ವಿಷಯಕ್ಕೆಲ್ಲ ಪ್ರತಿಭಟನೆಗೆ ಮುಂದಾಗುವ ನಮ್ಮ ದಲಿತ ಸಮಾಜದ ಹೋರಾಟಗಾರರೆಲ್ಲ ಇಂದು ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವುದು ಗೊತ್ತಿದ್ದರೂ ಅದರ ಬಗ್ಗೆ ಯಾವ ಸಂಘಟನೆಗಳು ಧ್ವನಿ ಎತ್ತದೆ  ಸುಮ್ಮನಿರುವುದು ಕಂಡರೆ ದೊಡ್ಡ ದುರಂತವೆಂದರೆ ತಪ್ಪೇನಿಲ್ಲ ಬಿಡಿ ಸ್ವಾಮಿ …..?

ಪೊಲೀಸರ ಏಟಿನಿಂದ ದಿನೇ ದಿನೇ ಆರೋಗ್ಯದಲ್ಲಿ ಜರ್ಜರಿತನಾಗುತ್ತಿರುವ ದಲಿತ ಯುವಕ  ಭಾಸ್ಕರ್ ಗಿಳಿಯಾರ್ ರವರಿಗೆ ಮುಂಚೆಯೇ ಬಲಗೈ ಮುಳೆ ಮುರಿದಿರುವ ಕಾರಣ ಕೈನಲ್ಲಿ ರಾಡನ್ನು ಶಸ್ತ್ರಚಿಕಿತ್ಸೆ ಮಾಡಿ ಅಳವಡಿಸಲಾಗಿತ್ತು ಆತನ ದುರದೃಷ್ಟವೇನೆಂದರೆ ಪೊಲೀಸರು ಒಡೆದಿರುವ ಒಡೆತದ ಪೆಟ್ಟು ಬಲವಾಗಿ ಪುನಃ ಅದೇ ಕೈಗೆ ಬಿದ್ದಿದೆ ಆದ್ದರಿಂದ  ಭಾಸ್ಕರ್ ರವರಿಗೆ ಇಂದು ಮತೊಮ್ಮೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.


ದಲಿತ ಬಡಜೀವಕ್ಕೆ ನ್ಯಾಯ ದೊರಕಿಸಿ ಕೊಡುವವರು ಯಾರು ಇಲ್ಲಾ….?

ಈ ಘಟನೆಯ ಬಗ್ಗೆ ನ್ಯಾಯ ಕೇಳಲು ಮುಂದಾದಗ ಪೊಲೀಸರ ಬೂಟಿನೇಟಿನಾ ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಮೇಲೇನೆ (BNSS)ಕಲಾಂ 35(3)  ಪ್ರಕರಣ ದಾಖಲಿಸಿ ತಾವು ಮಾಡಿರುವ ಕೃತ್ಯದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿರುವದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಅಧಿಕಾರಿಗಳು ಭಾಸ್ಕರ್ ಮೇಲೆ ಧಾಖಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಯಾಗಿ ಚಿಕಿತ್ಸೆ ಪಡೆಯುತಿದ್ದ ಪರಿಸ್ಥಿತಿಯಲ್ಲಿದ್ದ ಆ ವ್ಯಕ್ತಿಯು ಆಗೇನಾದರೂ BNSS 35(3) ರ ಪ್ರಕರಣದಲ್ಲಿ  ಭಾಗಿಯಾಗಿದ್ದರೆ ಆತನ ವಿರುದ್ಧ ಕಾನೂನಿನಡಿಯಲ್ಲಿ  ಬಂದಿಸಬೇಕಿತ್ತು,ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಡಿಸಿ ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿಸಬೇಕಿತ್ತು ಆದರೆ ಇದಾವುದು ಇಲ್ಲದೆ ಆತನನ್ನು ಥಳಿಸಿ ಭೂಟಿನ ಕಾಲಿನಲ್ಲಿ ತುಳಿದು ಅಲ್ಲಿಯೇ  ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ…. ✍️