March 14, 2025

ತುಮಕೂರು ಮಹಿಳಾ ಪೊಲೀಸ್ ಠಾಣೆಯ ವಿಶೇಷ ಪ್ರಕರಣದ ಕುರಿತು ತೀರ್ಪು: ಆರೋಪಿ ಜೀವಾವಧಿ ಶಿಕ್ಷೆಗೆ ಗುರಿ..!?

Spread the love



ತುಮಕೂರು:
ದಿ: 15/11/2021ರಂದು ತುಮಕೂರು ಮಹಿಳಾ ಪೊಲೀಸ್ ಠಾಣೆಗೆ ಶಿವಮ್ಮ ಕೋಂ ಕೆಂಪರಾಜು ರವರು ತಮ್ಮ ಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ದೂರು ನೀಡಿದ್ದರು. ದೂರುದಾರರು ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ: 124/2021 ಅನ್ನು IPC ಸೆಕ್ಷನ್ 376, 506 ಮತ್ತು POCSO ಆಕ್ಟ್ ಅಡಿ ದಾಖಲಿಸಿ, ತನಿಖೆ ಪ್ರಾರಂಭಗೊಂಡಿತು.

ಈ ಪ್ರಕರಣವನ್ನು ಆರಂಭದಲ್ಲಿ PSI ಶ್ರೀಮತಿ ಮಂಗಳಮ್ಮ ರವರು ದಾಖಲಿಸಿದ್ದು, ನಂತರ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ರಾಧಕೃಷ್ಣ ಟಿ.ಎಸ್. ರವರು ತನಿಖೆಯನ್ನು ಕೈಗೊಂಡರು. ತನಿಖೆಯ ವೇಳೆ, ಆರೋಪಿಯಾಗಿರುವ ಮಂಜುನಾಥ್ (31), ಸ/o ರಾಮಚಂದ್ರಯ್ಯ, ವಾಸ: ಜಿ ಬೊಮ್ಮನಹಳ್ಳಿ, ಕೋರ ಹೋಬಳಿ, ತುಮಕೂರು ತಾಲ್ಲೂಕು, ಅವರನ್ನು ದಸ್ತಗಿರಿ ಮಾಡಿ ತನಿಖೆ ಪೂರ್ಣಗೊಳಿಸಿದರು.

ನಂತರ, 2022ರಲ್ಲಿ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಮನ್ಯ ಎಫ್.ಟಿ.ಎಸ್.ಸಿ -1 ನ್ಯಾಯಾಲಯ ನ್ಯಾಯಾಧೀಶರು ಸದರಿ ಪ್ರಕರಣವನ್ನು ವಿಶೇಷ ಸಿ.ಸಿ ನಂ: 12/2022 ಅಡಿ ವಿಚಾರಣೆ ನಡೆಸಿದರು.

ಮೇಲಾಗಿನ ತನಿಖೆ ಮತ್ತು ವಾದ ಮಂಡನೆಯ ಪ್ರಕ್ರಿಯೆಯಲ್ಲಿ ಆರೋಪಿಯ ವಿರುದ್ಧದ ಆರೋಪವು ಸಾಬೀತಾಗಿದ್ದು, ದಿ: 22/01/2025ರಂದು ನ್ಯಾಯಾಧೀಶರು ಆರೋಪಿ ಮಂಜುನಾಥ್ ಬಿನ್ ರಾಮಚಂದ್ರಯ್ಯ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 1,25,000 ದಂಡವನ್ನು ವಿಧಿಸಿ ತೀರ್ಪು ನೀಡಿದರು.


ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಶ್ರೀಮತಿ ಆಶಾ ಕೆ.ಎಸ್. ವಾದ ಮಂಡನೆ ಮಾಡಿದ್ದು, ತನಿಖಾ ಸಹಾಯಕರಾಗಿ ಗಂಗರಾಜು ಸಿ. ಹೆಚ್.ಸಿ. (300) ಮತ್ತು ನರಸಿಂಹಮೂರ್ತಿ ಸಿ.ಪಿ.ಸಿ. (150) ಮಹತ್ವದ ಪಾತ್ರ ವಹಿಸಿದ್ದಾರೆ.

ಜಿಲ್ಲಾ ಪೊಲೀಸ್ ಕಛೇರಿ ತುಮಕೂರು ಈ ಪ್ರಕರಣದಲ್ಲಿ ನ್ಯಾಯವನ್ನು ಸಾಧಿಸಲು ಸ್ಪಷ್ಟವಾದ ತನಿಖೆ ಮತ್ತು ಸಮರ್ಥ ವಾದದ ಮೂಲಕ ಶ್ರೇಷ್ಠತೆಯನ್ನು ತೋರಿಸಿದೆ.