March 14, 2025

ಹಿರಿಯಡಕ ಪೊಲೀಸ್ ಠಾಣೆಯ PSI ಮತ್ತು ಸಿಬ್ಬಂದಿಯಿಂದ ದಲಿತ  ವ್ಯಕ್ತಿಯ ಮೇಲೆ ಹಲ್ಲೆ..!?

Spread the love



ಉಡುಪಿ: ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವಾರದಿಗಾರರ ಸಂಘದ ಉಡುಪಿ ಜಿಲ್ಲಾಧ್ಯಕ್ಷರಾದ ಆರತಿ ಗಿಳಿಯಾರ್ ಯವರ ಕುಟುಂಬದ ಸದಸ್ಯರಾದ ಭಾಸ್ಕರ್ ರವರ  ಮೇಲೆ ಹಿರಿಯಡಕ ಠಾಣೆಯ PSI ಮತ್ತು ಸಿಬ್ಬಂದಿಯು ಅಧಿಕಾರದ ದೌರ್ಜನ್ಯದಿಂದ ಹೊಡೆದು ಜಾತಿ ನಿಂದನೆ ಮಾಡಿರುವ ಬಗ್ಗೆ ವರದಿಯಾಗಿದೆ.



ಸುಮಾರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭಾಸ್ಕರ್, ಇವಗಷ್ಟೇ ಸಲ್ಪ ಆರೋಗ್ಯ ಚೇತರಿಸಿಕೊಂಡು ಬಹುದಿನಗಳ ನಂತರ ಸಮೀಪದಲ್ಲಿದ್ದ ಗೆಳೆಯನ್ನ ಭೇಟಿ ಮಾಡಿ ಮಾತನಾಡುತ್ತಿರುವ ಸಂದರ್ಭದಲ್ಲಿ, ಏಕಾ ಏಕಿ ಬಂದು ಏನೂ ವಿಚಾರಣೆಯು ಮಾಡದೆ ಹಿರಿಯಡಕ ಠಾಣೆಯ PSI, ವಾಹನ ಚಾಲಕರು, ಮತ್ತು ಪೊಲೀಸ್ ಕಾನ್ಸ್ಟೇಬಲ್ ಅವರು ಆತನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಈ ವೇಳೆ, ಭಾಸ್ಕರ್ ಅವರಿಗೆ ಜಾತಿ ನಿಂದನೆ ಮಾಡಿರುವುದಲ್ಲದೆ, ಮಾರಣಾಂತಿಕಾ ಹಲ್ಲೆ ಮಾಡಿರುವುದಾಗಿ ತಿಳಿದಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ  ಅಮಾಯಕ ವ್ಯಕ್ತಿಯನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

PSI ರವರಿಗೆ ವ್ಯಕ್ತಿಯನ್ನು ಹೊಡೆಯಲು ಕಾರಣ ಏನೆಂದು ಪ್ರಶ್ನಿಸಿದಾಗ, PSI ಅವರು “ನಮಗೆ ಗೊತ್ತಾಗದೆ ಆಗಿದೆ” ಎಂದು ನಿರ್ಲಕ್ಷ್ಯತನದಿಂದ ಉತ್ತರ ನೀಡಿದ್ದಾರೆ.ಇಂತಹ ಘಟನೆಗಳು ದಲಿತ ಸಮುದಾಯದ ಜನತೆಗೆ ಪದೇ ಪದೇ ಮರುಕಳಿಸುತ್ತಿರುವುದು ಸಹಜವಾಗಿದೆ. ಅಧಿಕಾರ ಕೈಯಲ್ಲಿದೆ ಇದೆ ಎನ್ನುವ ಕಾರಣ ಅಮಾಯಕರ  ಮೇಲೆ ದೌರ್ಜನ್ಯ ಎಸಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಹೇಳಿ ಸ್ವಾಮಿ….! ಸಮಾಜದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬಗಳ ಸುರಕ್ಷತೆಗೆ ಯಾವ ರಕ್ಷಣೆಯು ಇಲ್ಲದಿರುವ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎದುರಿಸುತ್ತಿದೆ.

ಅಧಿಕಾರಿಗಳು ಜನತೆಗೆ ನ್ಯಾಯ ಕೊಡಿಸುವವರಾಗಬೇಕು ಹೊರತು  ಈ ರೀತಿ ದೌರ್ಜನ್ಯ ನಡೆಸುವುದು ಸರಿಯೇ….? ಮುಂದಿನ ದಿನಗಳಲ್ಲಿ ಸಾರ್ವಜನಿಕರು ಇಲಾಖೆಯ ಮೇಲೆ ಇಟ್ಟಿರುವ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದಾಗಿದದೆ .ಮಾನ್ಯ ಜಿಲ್ಲಾ ವರಿಷ್ಟಾಧಿಕಾರಿಗಳು  ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಭಹಿರವಾಗಿ ದಲಿತನ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ಸೂಕ್ತ ಕಾರಣ ತಿಳಿಸುವಂತೆ PSI, ವಾಹನ ಚಾಲಕ, ಮತ್ತು ಕಾನ್ಸ್ಟೇಬಲ್ ವಿರುದ್ಧ ತಕ್ಷಣದ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ರಾಜ್ಯದಲ್ಲಿ ಪತ್ರಕರ್ತರ ಮತ್ತು ಅವರ ಕುಟುಂಬಗಳ ಮೇಲೆ ಹಲ್ಲೆ ಹಾರಾಜಿಯುತ್ತಿರುವುದು ತೀವ್ರವಾದ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ನ್ಯಾಯ ಒದಗಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯದ್ಯಾ0ತ ಪತ್ರಕರ್ತರುಗಳ ಮತ್ತು ರಾಜ್ಯ ಪತ್ರಕರ್ತರ ಸಂಘಟನೆಗಳಿಂದ ಬೃಹತ್ ಹೋರಾಟ ನಡೆಯುವ ಸಾಧ್ಯತೆ  ಎದುರಾಗಲಿದೆ.