March 14, 2025

ಪಾವಗಡ. ಕರ್ನಾಟಕ ಲೋಕಾಯುಕ್ತ ತು. ಜಿಲ್ಲಾ ವತಿಯಿಂದ ಕುಂದುಕೊರತೆಗಳ ಸಭೆ…!?

Spread the love


ತುಮಕೂರು :
ಪಾವಗಡ ತಾಲ್ಲೂಕಿನ SSK ಸಮುದಾಯ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ತುಮಕೂರು ಜಿಲ್ಲೆ ವತಿಯಿಂದ ಕುಂದುಕೊರತೆಗಳ ಸಭೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಲೋಕಾಯುಕ್ತ SP ಲಕ್ಷ್ಮೀನಾರಾಯಣ, DSP ರಾಮಕೃಷ್ಣಪ್ಪ, ತಹಶೀಲ್ದಾರ್ ವರದರಾಜು, ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಾನಕೀರಾಮ್ ಉಪಸ್ಥಿತರಿದ್ದು, ತಮ್ಮ ಮಾರ್ಗದರ್ಶನವನ್ನು ನೀಡಿದರು. ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು, ಸಿಬ್ಬಂದಿ, ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಯಲ್ಲಿ ಭಾಗವಹಿಸಿದರು.



ಸಭೆಯಲ್ಲಿ ಸಾರ್ವಜನಿಕರಿಂದ ತಮ್ಮ ಕುಂದುಕೊರತೆಗಳನ್ನು ಮಂಡಿಸಲು ಅವಕಾಶ ನೀಡಲಾಗಿದ್ದು, ಸಂಬಂಧಿತ ಅಧಿಕಾರಿಗಳು ತಕ್ಷಣ ಪರಿಹಾರಕ್ಕಾಗಿ ಕ್ರಮ ಕೈಗೊಂಡರು. ಈ ಮೂಲಕ ಜನರ ನಂಬಿಕೆಯನ್ನು ಸ್ಥಿರಗೊಳಿಸಲು ಈ ಕಾರ್ಯಕ್ರಮ ಸಹಾಯಕರಾಯಿತು.

ಮಾಹಿತಿ, ನ್ಯಾಯ, ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಕರ್ನಾಟಕ ಲೋಕಾಯುಕ್ತದ ಈ ಕಾರ್ಯಚರಣೆ ಸಾರ್ವಜನಿಕರಿಂದ ಪ್ರಶಂಸೆ ಗಳಿಸಿತು.