March 14, 2025

ಸಾಗರ: ಅಡಿಕೆ ತೋಟದಲ್ಲಿ ಗಾಂಜಾ ಸೇವನೆ; ಮೂವರು ಬಂಧನ..!?

Spread the love

ಶಿವಮೊಗ್ಗ :

ರಿಪ್ಪನ್‌ಪೇಟೆಯ ವಿನಾಯಕ ನಗರದ ಬಳಿಯ ಅಡಿಕೆ ತೋಟದಲ್ಲಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪಿಎಸ್‌ಐ ಪ್ರವೀಣ್ ಮತ್ತು ಎಸ್‌ಪಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಸ್ಥಳದಲ್ಲಿಯೇ ಪೇಟೆ ನಿವಾಸಿಗಳಾದ ವಿಜಯ್ ಕುಮಾರ್, ವಿನಾಯಕ ಮತ್ತು ಸುಜಿತ್ ಎಂಬ ಆರೋಪಿಗಳನ್ನು ಬಂಧಿಸಿದರು.

ಆರೋಪಿತರ ವಿರುದ್ಧ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಗಾಂಜಾ ಸೇವನೆ ಮಾಡಿದುದು ದೃಢಪಟ್ಟಿದೆ. ಈ ಹಿನ್ನೆಲೆ, ಮಾದಕ ದ್ರವ್ಯಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಮಾಜದಲ್ಲಿ ಗಾಂಜಾ ಸೇವನೆಯಂತಹ ಅಕ್ರಮ ಚಟುವಟಿಕೆಗಳಿಗೆ ತಡೆ ನೀಡಲು ಪಿಎಸ್‌ಐ ಪ್ರವೀಣ್ ಅವರ ತಂಡದ ಈ ಕ್ರಮ ಶ್ಲಾಘನೀಯವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.