
ಚಿಕ್ಕಮಗಳೂರು ಜಿಲ್ಲೆಯ ಕಲಸ ತಾಲ್ಲೂಕಿನ ಕೊನೆಬೈಲು ಗ್ರಾಮವು ಸುಮಾರು 150 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಗ್ರಾಮವಾಗಿದೆ. ಈ ಗ್ರಾಮದಲ್ಲಿ 60 ಕುಟುಂಬಗಳು ವಾಸವಾಗಿದ್ದು, ದಲಿತ ಜನಾಂಗದವರೇ ಬಹುಸಂಖ್ಯೆ. ಆದರೆ ಇಷ್ಟಾದರೂ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ.

ಗ್ರಾಮದಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದಿರುವುದರಿಂದ ರಾತ್ರಿ ವೇಳೆ ಗ್ರಾಮಕ್ಕೆ ರಾತ್ರಿ ಸಮಯದಲ್ಲಿ ಅಂಧಕಾರ ಆವರಿಸಿದೆ . ಸುಸರ್ಜಿತ ರಸ್ತೆ ಇಲ್ಲದೆ, ಮಳೆಗಾಲದಲ್ಲಿ ಚರಂಡಿಗೆ ಕಾಲುವೆ ಗಳನ್ನು ದಾಟಿ ಶಾಲೆ ಕಾಲೇಜಿಗೆ ಹೋಗುವ ಪರಿಸ್ಥಿತಿಯಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಗ್ರಾಮಸ್ಥರು ನದಿ ನೀರಿನ ಮೇಲೆಯೇ ಅವಲಂಬಿತರಾಗಿದ್ದಾರೆ. ಇದಲ್ಲದೆ, ವಾಸಿಸುವ ಮನೆಗಳಿಗೆ ಹಕ್ಕುಪತ್ರವಿಲ್ಲದೆ ಅವಮಾನಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಚಿಕ್ಕಮಕ್ಕಳು, ಹಿರಿಯರು, ಗರ್ಭಿಣಿ ಮಹಿಳೆಯರು ಅಥವಾ ಅನಾರೋಗ್ಯದಿಂದ ಬಳಲುವವರು ಆಸ್ಪತ್ರೆಗೆ ಹೋಗಬೇಕಾದರೆ, ಅವರನ್ನು ಕಂಬಳಿಯಲ್ಲಿ ಕಟ್ಟಿ ಹೊತ್ತೊಯ್ಯುವಂತಾಗಿದೆ. ಇವುಗಳು ಇಂದಿನ ಯುಗದಲ್ಲಿಯೂ ಕಾಣುವುದು ದುರಾದೃಷ್ಟಕರ.
ಗ್ರಾಮಸ್ಥರ ಪ್ರಕಾರ, ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕಾರಣಿಗಳು ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಆದರ ಬಳಿಕ ಗ್ರಾಮವನ್ನು ಸಂಪೂರ್ಣವಾಗಿ ಮರೆಯುತ್ತಾರೆ. ರಾಜಕೀಯ ಪಕ್ಷಗಳು ಸಹ ಜನಾಂಗ,ಜನಸಂಖ್ಯೆ, ಅಥವಾ ಮತದಾರರ ಆಧಾರದ ಮೇಲೆ ಗ್ರಾಮಗಳಿಗೆ ಸೌಲಭ್ಯಗಳ ತೀರ್ಮಾನಗಳನ್ನು ಮಾಡುತ್ತಿರುವ ಉದಾಹರಣೆಗಳು ಅನೇಕವೆನಿಸುತ್ತವೆ.
ಇನ್ನಾದರು ಸರ್ಕಾರ ಮತ್ತು ಸ್ಥಳೀಯ ಆಡಳಿತವು ಎಚ್ಚೆತ್ತುಕೊಂಡು ಈ ಗ್ರಾಮಕ್ಕೆ ತಕ್ಷಣ ಸುಸರ್ಜಿತ ವ್ಯಾವಸ್ಥೆ . ಮೂಲಭೂತ ಸೌಕರ್ಯಗಳಾದ ವಿದ್ಯುತ್, ರಸ್ತೆ, ಕುಡಿಯುವ ನೀರು ಮತ್ತು ಮನೆಗಳ ಹಕ್ಕುಪತ್ರಗಳನ್ನು ಗ್ರಾಮಸ್ಥರಿಗೆ ಒದಗಿಸುವ ಮೂಲಕ ಸಮಾಜದಲ್ಲಿ ಸಮಾನತೆಯನ್ನು ದೃಢಪಡಿಸಲು ತಕ್ಷಣ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ.