
ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಲಾಯಿತು. ಇತ್ತೀಚೆಗೆ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ದರೋಡೆ ಮತ್ತು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಈ ಸಭೆಯು ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ಮಹತ್ವದ ತೀರ್ಮಾನಗಳನ್ನು ಕೈಗೊಂಡಿತು.

ಬ್ಯಾಂಕ್ ಮತ್ತು ಎಟಿಎಂ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು. ಸಮೀಪದ ಸರಹದ್ದುಗಳಲ್ಲಿ ಪೊಲೀಸ್ ತಂಡಗಳಿಂದ ಗಸ್ತು ಹೆಚ್ಚಿಸಲಾಗಿದ್ದು, ಎಲ್ಲಾ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಭದ್ರತಾ ಕ್ರಮಗಳನ್ನು ಅನುಸರಿಸಲು ಸೂಚನೆ ನೀಡಲಾಗಿದೆ.
ಇದೆ ವೇಳೆ, ಪೊಲೀಸರು ಬ್ಯಾಂಕ್ ಮ್ಯಾನೇಜರ್‌ಗಳಿಗೆ ಎಟಿಎಂಗಳ ಸಿಸಿಟಿವಿ ಕ್ಯಾಮೆರಾಗಳನ್ನು ಸದಾ ಕಾರ್ಯ ನಿರ್ವಹಿಸಬಹುದಾದ ಸ್ಥಿತಿಯಲ್ಲಿಟ್ಟುಕೊಳ್ಳಲು, ಹಣ ಸಾಗಿಸುವಾಗ ಹೆಚ್ಚಿನ ಭದ್ರತೆ ಒದಗಿಸಲು, ಹಾಗೂ ಯಾವುದೇ ಸಂಶಯಾಸ್ಪದ ಚಲನೆಗಳನ್ನು ತಕ್ಷಣ ಪೊಲೀಸರಿಗೆ ತಿಳಿಸಲು ಕೋರಿದ್ದಾರೆ.
ಈ ಕ್ರಮಗಳಿಂದ ದರೋಡೆ ಪ್ರಕರಣಗಳನ್ನು ಕಡಿಮೆಮಾಡಲು ಮತ್ತು ಜನರ ಹಣದ ಸುರಕ್ಷತೆ ಒದಗಿಸಲು ಸರ್ಕಾರ ಗಟ್ಟಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ.