March 14, 2025

ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ರಾಜ್ಯಮಟ್ಟದ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ..!?

Spread the love



ದಾವಣಗೆರೆ:

ದಿನಾಂಕ 19-01-2025 ರಂದು ಕುವೆಂಪು ಕನ್ನಡ ಭವನ, ವಿದ್ಯಾನಗರ, ದಾವಣಗೆರೆ ಯಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟ, ಬೆಂಗಳೂರು ಇವರ ಆಯೋಜನೆಯಲ್ಲಿಯೇ ರಾಜ್ಯಮಟ್ಟದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವವು ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವೆಯಾದ್ದರಿಂದ ಅನೇಕ ಸಾಧಕರನ್ನು ಗುರುತಿಸಿ, “ಸಾಧಕ ರತ್ನ” ಪ್ರಶಸ್ತಿಯನ್ನು ವಿತರಿಸಲಾಯಿತು. ಪ್ರಶಸ್ತಿಯನ್ನು ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ, ಮಂಗಳೂರು ಅವರು ಪ್ರದಾನ ಮಾಡಿದರು. ಅವರೊಂದಿಗೆ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜೋಗಿ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಪ್ರಮುಖ ಉದ್ದೇಶವು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಸಾಂಸ್ಕೃತಿಕ ಪರಂಪರೆ ಮತ್ತು ಸಾಹಿತ್ಯದ ವೈಭವವನ್ನು ಸಂರಕ್ಷಿಸುವ ಜೊತೆಗೆ ಸಮಾಜದ ದಿಟ್ಟ ಸಾಧಕರನ್ನು ಗೌರವಿಸುವುದಾಗಿತ್ತು.

ಎಲ್ಲಾ ಉಪಸ್ಥಿತರಾದ ಗಣ್ಯರು ಕಾರ್ಯಕ್ರಮವನ್ನು ಮೆಚ್ಚಿಕೊಂಡು, ಈ ರೀತಿಯ ಉತ್ಸವಗಳು ಸಮುದಾಯದ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.