
ಶಿವಮೊಗ್ಗ ತಾಲೂಕಿನ ಕೊನಗವಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾಳಕೇಶಪುರ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪೈಪ್ ಲೈನ್ ಒಡೆದು ನೀರು ಕಲುಷಿತವಾಗಿದ್ದು, ಅದನ್ನು ಬಳಸಿ ಮಕ್ಕಳಿಗೆ ಸಾಂಕ್ರಾಮಿಕ ಜ್ವರ ಬಂದು ನರಳಾಡುವ ಸ್ಥಿತಿ ನಿರ್ಮಾಣವಾಗಿದೆ.

ಜುಲೈ ತಿಂಗಳಲ್ಲಿ ಪಂಚಾಯತಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ನಂತರ, ನವೆಂಬರ್ ತಿಂಗಳಲ್ಲಿ ಗ್ರಾಮದ ಸದಸ್ಯೆ ಅನುಸುಯ್ಯ ಭಾಯಿ W/o ರಾಮನಾಯಕ್ ರ ಗಮನಕ್ಕೆ ಈ ವಿಷಯವನ್ನು ತಂದಾಗ ಕೂಡ ಅವರು ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ.
ಗ್ರಾಮವು ಕಡಿಮೆ ಜನಸಂಖ್ಯೆ ಹೊಂದಿರುವುದರಿಂದ ಜನರ ದೂರುಗಳನ್ನು ಕಡೆಗಣಿಸಲಾಗುತ್ತಿದೆ. ಒಂದು ಚಿಕ್ಕ ಕೆಲಸಕ್ಕೂ 6 ತಿಂಗಳು ಕಳೆದರೂ ಪಂಚಾಯತಿಯಿಂದ ಯಾವುದೇ ಪರಿಹಾರ ಒದಗಿಸಲಾಗಿಲ್ಲ. PDO ಮತ್ತು ಸದಸ್ಯೆ ಅನುಸುಯ್ಯ ಅವರು “ನೀವೇ ಸರಿ ಮಾಡಿಸಿಕೊಳ್ಳಿ, ನಾವು ಬ್ಯುಸಿ ಇದ್ದೇವೆ”ಇನ್ನು 15 ದಿನವಾದರು ಹಾಗಲ್ಲ ಎಂಬ ಅನಾದರದ ಉತ್ತರ ನೀಡಿ, ಸಾರ್ವಜನಿಕರಿಗೆ ಮರ್ಯಾದೆ ಇಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ.ಇನ್ನು ಮುಂದೆಯಾದರೂ ಈ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯಗಳು ಒದಗುವಂತೆ
ಇದೇ ಸ್ಥಿತಿ ಮುಂದುವರಿಸಿದರೆ ಗ್ರಾಮಸ್ಥರು ಉಚ್ಛಾಧಿಕಾರಿಗಳಿಗೆ ದೂರು ನೀಡುವ ತೀರ್ಮಾನಕ್ಕೆ ಬಂದಿದ್ದಾರೆ.
ಪಂಚಾಯತಿ ಮತ್ತು ಸದಸ್ಯರ ಉತ್ತರಕ್ಕೆ ಬೇಸತ್ತು ಗ್ರಾಮಸ್ಥರೆ ಆ ಸಮಸ್ಸೆಯನ್ನು ಬಗೆಹರಿಸಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ