March 14, 2025

ಗೃಹ ಸಚಿವರ ಮನೆಮುಂದೆ ಬಿಜೆಪಿ ಪ್ರತಿಭಟನೆಗೆ ಕರೆ: ಬಿಗಿ ಪೊಲೀಸ್ ಭದ್ರತೆ.!?

Spread the love


ತುಮಕೂರು :
ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆಗೆ ವಿರೋಧ ವ್ಯಕ್ತಪಡಿಸುವ ಮೂಲಕ, ತುಮಕೂರಿನ ಹೆಗ್ಗೆರೆ ಬಳಿಯ ಸಿದ್ದಾರ್ಥ ನಗರದಲ್ಲಿರುವ ಡಾ.ಜಿ. ಪರಮೇಶ್ವರ್ ಅವರ ಮನೆಮುಂದೆ ಬಿಜೆಪಿ ಪಕ್ಷದ ಜಿಲ್ಲಾ ಘಟಕ ಇಂದು ಬೆಳಗ್ಗೆ 10:30ಕ್ಕೆ ಪ್ರತಿಭಟನಾ ಕಾರ್ಯವನ್ನು ಆಯೋಜಿಸಿದೆ.

ಈ ಹಿನ್ನೆಲೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಹೆಚ್ಚಿನ ಬಿಗಿತ ಬಿಗಿ ಭದ್ರತೆ ನೀಡಿದೆ. ಭದ್ರತೆಯನ್ನು ಸುಸಜ್ಜಿತಗೊಳಿಸಲು, ಡಾ.ಜಿ. ಪರಮೇಶ್ವರ್ ಅವರ ಮನೆಮುಂದೆ ಸುಮಾರು ನೂರೈವತ್ತಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದಾರೆ.

ಘಟನೆ ಉಲ್ಬಣಗೊಳ್ಳದಂತೆ ಕ್ರಮ ಕೈಗೊಂಡಿರುವ ಪೊಲೀಸರು, ಪ್ರತಿಭಟನಾಕಾರರು ಮತ್ತು ಸ್ಥಳೀಯರು ಶಾಂತಿಯನ್ನು ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಹೆಚ್ಚಿನ ಜನರೊಂದಿಗೆ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯ ಮೇಲಕ್ಷ ವಹಿಸಲು ಪೊಲೀಸ್ ತಂಡ ಸಜ್ಜಾಗಿದೆ.

ಹಸುಗಳ ಮೇಲಿನ ಕೃತ್ಯವು ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಈ ಘಟನೆ ರಾಜಕೀಯ ವಲಯದಲ್ಲಿಯೂ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟಿಸಿದೆ.