
ನೆಲಮಂಗಲ :
ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರು ಸನ್ ರೂಫ್ ಮೂಲಕ ಹೊರಬಂದು ಅಪಾಯಕಾರಿ ರೀತಿಯಲ್ಲಿ ಸಂಚಾರ ಮಾಡುತ್ತಿದ್ದ ಘಟನೆ ನಡೆದಿದೆ. ಈ ಕುರಿತಂತೆ ಸಾರ್ವಜನಿಕರಾದ ಸುಮನ್ ಎಂಬವರು ತಮ್ಮ ವಾಟ್ಸಾಪ್ ಮೂಲಕ ಈ ಘಟನೆಗೆ ಸಂಬಂಧಿಸಿದ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಕಾರಿನ ಸನ್ ರೂಫ್ ಮೂಲಕ ಹೊರಬಂದು ಅಪಾಯಕಾರಿಯಾಗಿ ಸಂಚರಿಸುವುದು ಸ್ಥಳೀಯರ ನಡುವೆಯೇ ಆತಂಕವನ್ನು ಉಂಟುಮಾಡಿತ್ತು. ಮೇಲ್ಕಂಡ ಮಾಹಿತಿ ಪಡೆದ ನೆಲಮಂಗಲ ಸಂಚಾರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಕಾರು ಚಾಲಕನನ್ನು ಮತ್ತು ಸದರಿ ಪ್ರಯಾಣಿಕನನ್ನು ಠಾಣೆಗೆ ಕರೆಸಿದರು.
ಈ ಸಂದರ್ಭ, ಅಪಾಯಕಾರಿ ರೀತಿಯ ಚಲನೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಪೊಲೀಸರು ಸದರಿಯವರಿಗೆ ಸಮಗ್ರವಾಗಿ ತಿಳುವಳಿಕೆ ನೀಡಿದರು. ಸಾರ್ವಜನಿಕರ ಸುರಕ್ಷತೆಗಾಗಿ ಇನ್ನುಮುಂದೆ ಈ ರೀತಿಯ ಅಪಾಯಕಾರಿಯ ಚಲನೆಗಳು ಮರುಕಳಿಸಬಾರದೆಂದು ಚಾಲಕರಿಗೆ ಕಠಿಣ ಎಚ್ಚರಿಕೆ ನೀಡಲಾಯಿತು.
ಪೊಲೀಸರ ಈ ಕ್ರಮ ಸಾರ್ವಜನಿಕರಲ್ಲಿ ಶ್ಲಾಘನೆಗೆ ಪಾತ್ರವಾಗಿದ್ದು, ರಸ್ತೆ ಸುರಕ್ಷತೆಯ ಮಹತ್ವವನ್ನು ಎತ್ತಿ ಹಿಡಿಯುವಂತಾಗಿದೆ. ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ತಮ್ಮದಾಗಿಯೇ ಸಮರ್ಥವಾದ ಭದ್ರತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಸಂದೇಶವನ್ನು ಈ ಕಾರ್ಯಾಚರಣೆ ಬಿತ್ತರಿಸಿದೆ.