March 14, 2025

ಶಿರಾ: ಅಧಿಕಾರಿಗಳ ಮುಂದೆ ರೈತ ವಿಷ ಸೇವನೆ, ಆಸ್ಪತ್ರೆಗೆ ದಾಖಲು!?

Spread the love

ಶಿರಾ ತಾಲ್ಲೂಕಿನ ಕಲ್ಲುಕೋಟೆ ಸರ್ವೆ ನಂಬರ್ 118 ಜಮೀನಿನಲ್ಲಿ ಕಾಡುಗೊಲ್ಲ ಸಮುದಾಯದ ರೈತ ಕುಟುಂಬ ಅಧಿಕಾರಿಗಳ ಮುಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದೆ. ಈ ಘಟನೆ ಬಳಿಕ ರೈತ ಕುಟುಂಬವನ್ನು ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರಸಭೆ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗೆ ಜಮೀನು ಸ್ವಾಧೀನಕ್ಕೆ ಪಡೆದಿರುವುದನ್ನು ವಿರೋಧಿಸಿ, ಜಮೀನಿನ ಅನುಭವದಾರರು ಧರಣಿ ನಡೆಸುತ್ತಿದ್ದರು. ಈ ಸಮಯದಲ್ಲಿ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ, ಧರಣಿಯನ್ನು ನಿಲ್ಲಿಸಲು ಹಾಗೂ ಜಮೀನನ್ನು ನಿವೇಶನಕ್ಕಾಗಿ ಬಿಟ್ಟು ಕೊಡಲು ಸೂಚಿಸಿದರು. ಇದರಿಂದ ಮನನೊಂದು ರೈತ ಕುಟುಂಬದವರು ವಿಷ ಸೇವಿಸಿದರು.

ಈ ಘಟನೆ ಶಿರಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪರಿಸ್ಥಿತಿಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮೀನಿನ ವಿಚಾರದಲ್ಲಿ ಅಧಿಕಾರಿಗಳು ಸಮರ್ಪಕ ಪರಿಹಾರ ಕ್ರಮ ಕೈಗೊಳ್ಳುವಂತೆ ಬೇಡಿಕೆ ಹಾಕಲಾಗುತ್ತಿದೆ.