March 14, 2025

ಚಿಕ್ಕಮಗಳೂರು: ನಕ್ಸಲಿಸಂ ತೊರೆದು ಮುಖ್ಯವಾಹಿನಿಗೆ ಬಂದಿದ್ದ 6 ನಕ್ಸಲರು ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡರು.!?

Spread the love

ಚಿಕ್ಕಮಗಳೂರಿನ ಮೇಗೂರು ಅರಣ್ಯ ಪ್ರದೇಶದಲ್ಲಿ ಪೊಲೀಸರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ತೀವ್ರ ಶೋಧ ನಡೆಸಿ, ಆರು ಬಂದೂಕುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಶಕ್ಕೆ ಸಿಕ್ಕ ಶಸ್ತ್ರಾಸ್ತ್ರಗಳಲ್ಲಿ ಒಂದು ಎ.ಕೆ–56 ರೈಫಲ್, ಮೂರು 303 ರೈಫಲ್, ಹನ್ನೆರಡು ಬೋರ್ ಎಸ್‌ಬಿಬಿಎಲ್ ಬಂದೂಕು, ಮತ್ತು ಒಂದು ಸ್ವದೇಶಿ ನಿರ್ಮಿತ ಬಂದೂಕು ಸೇರಿವೆ.

176 ಮದ್ದುಗುಂಡುಗಳಾದ 7.62 ಎಂಎಂ ಎ.ಕೆ.–56 ಮದ್ದುಗುಂಡು 11, 303 ರೈಫಲ್ ಮದ್ದುಗುಂಡು 133, 12 ಬೋರ್ ಕಾರ್ಟ್ರಿಡ್ಜಸ್ 24, ಮತ್ತು ಸ್ವದೇಶಿ ಪಿಸ್ತೂಲ್ ಮದ್ದುಗುಂಡುಗಳು 8, ಜೊತೆಗೆ ಖಾಲಿ ಮ್ಯಾಗ್ಜಿನ್ ಕೂಡಾ ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಸಂಬಂಧ ಚಿಕ್ಕಮಗಳೂರಿನ ಜಯಪುರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 251 (1) (ಬಿ), 7 ಮತ್ತು 25 (1ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದ್ದಾರೆ.