
ಗುಬ್ಬಿ: 05.01.2025 ರಂದು ಕಸಬಾ ಹೋಬಳಿ ಮುದ್ದನಹಳ್ಳಿ ಗ್ರಾಮದ ಬಳಿ ದಲಿತ ಯುವಕರ ಮೇಲೆ ಜಾತಿ ನಿಂದನೆ ಮಾಡಲಾಗಿದ್ದು, ಹಲ್ಲೆಯ ಘಟನೆಯು ಉದ್ಘಟನವಾಗಿದೆ. ದೀಪು (19) ಎಂಬ ದಲಿತ ಯುವಕ ತನ್ನ ಹಾಲಿನ ಗಾಡಿಯಲ್ಲಿ ಅಂಬೇಡ್ಕರ್ ಅವರ ಜೈ ಭೀಮ್ ಹಾಡು ಕೇಳಿಸುತ್ತಿದ್ದ ವೇಳೆ, ರೈಲ್ವೇ ಇಲಾಖೆ ಪೊಲೀಸ್ ಚಂದ್ರಶೇಖರ್ ಮತ್ತು ಮತ್ತೊಬ್ಬ ನರಸಿಂಹರಾಜು ಎನ್ನುವವರು ಹತ್ತಿರ ಬಂದಿದ್ದಾರೆ.
ಈ ಹಾಡು ಕೇಳಿ ಆಕ್ರೋಶಗೊಂಡ ಇವರು, ದೀಪು ಮತ್ತು ಮತ್ತೊಬ್ಬ ದಲಿತ ಯುವಕನನ್ನು ರಸ್ತೆಯಲ್ಲಿ ಅಡ್ಡಗಟ್ಟಿ, “ನೀವು ಯಾವ ಜಾತಿಯವರು?” ಎಂದು ಪ್ರಶ್ನಿಸಿ, ಜಾತಿ ನಿಂದನೆ ಮಾಡಿದ ನಂತರ, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮರ್ಮಾಂಗಕ್ಕೆ ಗಂಭೀರವಾಗಿ ಹೊಡೆದು, ಹಾಡು ಎಲ್ಲಿಯೂ ಹಾಕದಂತೆ ತಾಕೀತು ಮಾಡಿರುವುದಾಗಿ ದೂರು ದಾಖಲಿಸಲಾಗಿದೆ

.
ಹಲ್ಲೆಗೆ ಒಳಗಾದ ದೀಪು ಹಾಗೂ ಇನ್ನೊಬ್ಬ ದಲಿತ ಯುವಕ ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ತೀವ್ರ ಖಂಡನೆ ವ್ಯಕ್ತವಾಗಿದೆ, ಮತ್ತು ತಪ್ಪಿತಸ್ಥರ ವಿರುದ್ಧ ಗುಬ್ಬಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ಧಾಖಲಾಗಿದ್ದು ಕಠಿಣ ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.