March 14, 2025

DYSP ರಾಮಚಂದ್ರಪ್ಪನವರ ದೂರು ನೀಡಲು ಬಂದ ಮಹಿಳೆ ಜೊತೆ ಅನೈತಿಕ ವರ್ತನೆ ಸಮಾಜಿಕ ಜಾಲತನದಲ್ಲಿ ವೈರಲ್..!?

Spread the love



ತುಮಕೂರು ಜಿಲ್ಲೆ :


ಮದುಗಿರಿಯ DYSP ರಾಮಚಂದ್ರಪ್ಪನವರು ಸರ್ಕಾರಿ ಕಚೇರಿಯಲ್ಲಿ ,ಕರ್ತವ್ಯದಲ್ಲಿರುವಾಗಲೇ ಪಾವಗಡದಿಂದ ಜಮೀನು ವ್ಯಾಜ್ಯದ ಬಗ್ಗೆ  ದೂರು ಕೊಡಲು ಬಂದ ಯುವತಿಯೊಂದಿಗೆ ತನ್ನ ಕಚೇರಿಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಅನೈತಿಕ ಚಟುವಟಿಕೆ ಆರಂಭಿಸಿದ್ದು, ಇದನ್ನು ಕೆಲವರು ಗಮನಿಸಿ ಕಿಟಕಿಯ ಮೂಲಕ ಚಿತ್ರೀಕರಣ ಮಾಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆಯು ಸಾರ್ವಜನಿಕ ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಕೃತ್ಯದಿಂದ ಪೊಲೀಸ್ ಇಲಾಖೆಯ ಗೌರವಕ್ಕೆ ದೊಡ್ಡ ಧಕ್ಕೆಯಾಗಿದ್ದು, ನಿಷ್ಠಾವಂತ ಪೊಲೀಸ್ ಅಧಿಕಾರಿಗಳಿಗೂ ನೈತಿಕ ಆಘಾತವಾಗಿದೆ. ಸಮರ್ಥ ಮತ್ತು ಜವಾಬ್ದಾರಿಯುತ ಅಧಿಕಾರಿಯಿಂದ ಇಂತಹ ದುರಾಚಾರ ನಡೆಯುವಂತಿದ್ದರೆ, ಸಾರ್ವಜನಿಕರು ಪಾಲಿಸುವುದಾದರೂ ಏನು ಎಂಬ ಪ್ರಶ್ನೆ ಎದುರಾಗುತ್ತದೆ.  ಈ ಕೃತ್ಯದಿಂದ ಪೋಲೀಸರ  ನೈತಿಕತೆಗೆ ದಕ್ಕೆ ಉಂಟಾಗಿದೆ.


ಸರ್ಕಾರಿ ಕಚೇರಿಯಲ್ಲೇ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಇಂತಹ ಅಸಭ್ಯ ಕೆಲಸಕ್ಕೆ ಕೈ ಹಾಕಿದಂಥ ಅಧಿಕಾರಿ ರಾಮಚಂದ್ರಪ್ಪನವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುತ್ತಿದೆ. ಇಂತಹ ಘಟನೆಗಳು ಸಾರ್ವಜನಿಕ ನಂಬಿಕೆಯನ್ನು ಹಾಳು ಮಾಡುವುದು ಮಾತ್ರವಲ್ಲದೆ, ನಿಷ್ಠಾವಂತ ಅಧಿಕಾರಿಗಳ ಮೇಲಿನ ಗೌರವವನ್ನು ಕೂಡ ಕಳೆದುಕೊಳ್ಳುವಂತೆ ಮಾಡುತ್ತಿದೆ.

ಈ ಹಿನ್ನಲೆಯಲ್ಲಿ, ಹಿರಿಯ ಅಧಿಕಾರಿಗಳು  ಇಂತಹ ಕೃತ್ಯಗಳನ್ನು ತಡೆಗಟ್ಟಲು ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕಾಗಿದೆ. ಕಾನೂನು ರಕ್ಷಕರೂ ತಮ್ಮ ಹುದ್ದೆಯಲ್ಲಿ ನೈತಿಕತೆಯ ಮಿತಿಯನ್ನು ಮೀರಿ ಜವಾಬ್ದಾರಿ ತಪ್ಪಿದರೆ, ಸಾಮಾನ್ಯ ಜನರು ಕೆಟ್ಟು  ಹೋಗುವುದು ಸಹಜವೇ. 


ಜವಾಬ್ಧಾರಿಯುತ ಸ್ಥಾನದಲ್ಲಿ ಅಧಿಕಾರಿಯೊಬ್ಬನಿಂದ ಇಡೀ ಇಲಾಖೆಯೇ ತಲೆ ತಗ್ಗಿಸುವ ಹಾಗಾಗಿದೆ.ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧ ಪಟ್ಟ ಮೇಲಧಿಕಾರಿಗಳು ರಾಮಚಂದ್ರಪ್ಪನ್ನ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ…..✍️