
ಆನೇಕಲ್ :
ತಾಲೂಕಿನ ಅತ್ತಿಬೆಲೆಯಲ್ಲಿ ಶೀಲದ ಶಂಕೆಯಿಂದ ಪತಿ ತನ್ನ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬಿಹಾರ ಮೂಲದ ಮಲ್ಲಿಕಾ ಖಾತೂನ್ (35) ಎಂಬ ಮಹಿಳೆಯೇ ಈ ದುರಂತದ ಬಲಿ. ಶೀಲದ ಮೇಲೆ ಅನುಮಾನ ಹೊಂದಿದ ಪತಿ ಮೊಹಮ್ಮದ್ ಸಯ್ಯದ್ ಅನ್ಸಾರಿ ತನ್ನ ಪತ್ನಿಯ ತಲೆಗೆ ಸುತ್ತಿಗೆಯಿಂದ ಬಲವಾಗಿ ಹೊಡೆದು ಆಕೆಯ ಪ್ರಾಣ ಕಸಿದುಕೊಂಡಿದ್ದಾನೆ.
ಘಟನೆಯ ನಂತರ ಸ್ಥಳೀಯರು ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕೊಲೆಗಾರನನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ಮೊಹಮ್ಮದ್ ಸಯ್ಯದ್ ಅನ್ನು ವಶಕ್ಕೆ ಪಡೆದ ಪೊಲೀಸರು ತಕ್ಷಣವೇ ವಿಚಾರಣೆ ಪ್ರಾರಂಭಿಸಿದ್ದಾರೆ.
ಈ ಘಟನೆ ಗ್ರಾಮದಲ್ಲಿ ಭೀತಿ ಮತ್ತು ಆಘಾತವನ್ನು ಉಂಟುಮಾಡಿದ್ದು, ಪತ್ನಿಯ ವಿರುದ್ಧದ ಶೀಲದ ಶಂಕೆಯಿಂದ ಇಂತಹ ದುರಂತ ನಡೆಯುವುದನ್ನು ಖಂಡಿಸಿದ್ದಾರೆ. ಸದ್ಯ, ವಿಚಾರಣೆಯ ಮೂಲಕ ಘಟನೆ ಹಿಂದಿನ ಸತ್ಯಾಂಶವನ್ನು ತಿಳಿಯಲು ಪೊಲೀಸರು ಮುಂದುವರಿಸಿದ್ದಾರೆ.