
ಶಿವಮೊಗ್ಗ ಜಿಲ್ಲೆ :
ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಪಂ ಸದಸ್ಯೆಯ ಮನೆಗೆ ಬೀಗ ಹಾಕಿದ ಖಾಸಗಿ ಪೈನಾನ್ಸ್ ನಾ ಗೊಂದಲದ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯೆ ಅರ್ಪಿತಾ ಅವರ ಮನೆಗೆ ಬೀಗ ಹಾಕಿ ಕುಟುಂಬವನ್ನೇ ಬೀದಿಗೆ ತಳ್ಳಿದ ಖಾಸಗಿ ಫೈನಾನ್ಸ್ ಸಂಸ್ಥೆ
ಅರ್ಪಿತಾ 2019ರಲ್ಲಿ ತಮ್ಮ ಮನೆ ಮೇಲೆ ಖಾಸಗಿ ಫೈನಾನ್ಸ್ ಬ್ಯಾಂಕಿನಿಂದ ₹5 ಲಕ್ಷ ಸಾಲ ಪಡೆದಿದ್ದರು. ಗಡುವಿನಂತೆ 5 ವರ್ಷಗಳ ಕಾಲ EMI ಪಾವತಿಸಿದ್ದರು. ಆದರೆ, ಹೊಸ ಸಾಲಕ್ಕಾಗಿ ಬ್ಯಾಂಕಿಗೆ ಹೋದಾಗ, 7 ವರ್ಷಗಳ ಅವಧಿಗೆ ಸಾಲ ನೀಡಿದ ಹಿನ್ನೆಲೆ ಇನ್ನೂ 2 ವರ್ಷ ಪಾವತಿಸಬೇಕೆಂದು ಹೇಳಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಈ ಗೊಂದಲ ಉಂಟಾಗಿದೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.
ಇದರ ಮಧ್ಯೆ, ಅವರ ಪತಿ ರಾಜಪ್ಪನಿಗೆ ಆರೋಗ್ಯ ಸಮಸ್ಯೆ ತಲೆದೋರಿದ್ದು, ದೇವಾಲಯದಲ್ಲಿ ವಾಸಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶುಕ್ರವಾರ ಖಾಸಗಿ ಫೈನಾನ್ಸ್ ಸಿಬ್ಬಂದಿ ಮನೆಗೆ ಬಂದು ಅರ್ಪಿತಾಳ ಕುಟುಂಬವನ್ನು ಹೊರಗೆ ಕಳಿಸಿ, ಮನೆಗೆ ಬೀಗ ಹಾಕಿದ್ದಾರೆ. ಗ್ರಾಪಂ ಸದಸ್ಯೆ ಅರ್ಪಿತಾ ಇದೀಗ ಮನೆಯಲ್ಲಿ ವಾಸಿಸಲು ಅಸಾಧ್ಯವಾಗದ ಕಾರಣ ಮನೆಯ ಮುಂಭಾಗದಲ್ಲೇ ತಾತ್ಕಾಲಿಕ ವಾಸಸ್ಥಾನ ಮಾಡಿಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಖಾಸಗಿ ಫೈನಾನ್ಸ್ ಸಂಸ್ಥೆಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ನ್ಯಾಯಕ್ಕಾಗಿ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ…