March 14, 2025

ಇಂಡುವಳ್ಳಿ ಗ್ರಾಮ ಪಂಚಾಯತಿ ಪಿಡಿಓ ಲಂಚ ವಹಿವಾಟಿನಲ್ಲಿ ಲೋಕಾಯುಕ್ತ ಬಲೆಗೆ…..!?

Spread the love



ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಇಂಡುವಳ್ಳಿ ಗ್ರಾಮ ಪಂಚಾಯತಿಯಲ್ಲಿ ಪ್ರಭಾರ ಪಿಡಿಓ ಆಗಿರುವ ಈಶ್ವರಪ್ಪ ಅವರು ಈ-ಖಾತೆ ಮಾಡಿಕೊಡಲು ₹5000 ಲಂಚವನ್ನು ಪಿರ್ಯಾದಿದಾರರಿಂದ ಪಡೆಯುವಾಗ ಶಿವಮೊಗ್ಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ಎಸ್. ಸುರೇಶ್ ನಡೆಸುತ್ತಿದ್ದಾರೆ.

ಘಟನೆ ವಿವರಗಳು: ಇಂಡುವಳ್ಳಿ ಗ್ರಾಮದ ಮಹಮ್ಮದ್ ಗೌಸ್ ಅವರ ತಂದೆ ಭಾಷಾ ಸಾಬ್ ತಮ್ಮ ಜಮೀನಿನಲ್ಲಿ ಮನೆ ಕಟ್ಟಿದ್ದು, ಆ ಮನೆಗೆ ಲೋನ್ ತೆಗೆದುಕೊಳ್ಳಲು ಈ-ಖಾತೆ ಮಾಡಿಕೊಡಲು ಇಂಡುವಳ್ಳಿ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದ್ದರು. ಈಶ್ವರಪ್ಪ ಅವರು ಮನೆ ಜಾಗಕ್ಕೆ ಬಂದು ಅಳತೆ ನಡೆಸಿ, ಈ-ಖಾತೆ ಮಾಡಿಕೊಡಲು ₹5000 ಲಂಚವನ್ನು ಡಿ.20 ರಂದು ಬೇಡಿದ್ದರು. ಪಿರ್ಯಾದಿದಾರರು ಲಂಚ ನೀಡಲು ಇಚ್ಛಿಸದೆ, ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು.

ಲೋಕಾಯುಕ್ತ ಕಾರ್ಯಾಚರಣೆ: ಡಿ.24ರಂದು ಬೆಳಿಗ್ಗೆ ಸೊರಬ ಪೋಸ್ಟ್ ಆಫೀಸ್ ಕಚೇರಿ ಬಳಿ ಪಿಡಿಓ ಈಶ್ವರಪ್ಪ ಅವರು ₹5000 ಲಂಚವನ್ನು ಸ್ವೀಕರಿಸುವಾಗ, ಲೋಕಾಯುಕ್ತದ ತಂಡ ದಾಳಿ ನಡೆಸಿ ಲಂಚದ ಹಣವನ್ನು ಜಪ್ತಿ ಮಾಡಿತು. ಈಶ್ವರಪ್ಪ ಅವರನ್ನು ವಶಕ್ಕೆ ಪಡೆಯಲಾಗಿದೆ.

ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ ಚೌದರಿ ಎಂ.ಹೆಚ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಹೆಚ್.ಎಸ್. ಸುರೇಶ್ ಮತ್ತು ಅವರ ತಂಡದ ಯೋಗೇಶ್, ಮಂಜುನಾಥ, ಪ್ರಶಾಂತ್ ಕುಮಾರ್, ಚೆನ್ನೇಶ್, ಅರುಣ್ ಕುಮಾರ್ ಸೇರಿದಂತೆ ಹಲವು ಸಿಬ್ಬಂದಿ ಯಶಸ್ವಿಯಾಗಿ ನಡೆಸಿದರು.

ಪ್ರಸ್ತುತ ಸ್ಥಿತಿ: ಅಪಾದಿತ ಈಶ್ವರಪ್ಪ ಅವರ ವಿರುದ್ಧ ತನಿಖೆ ನಡೆಯುತ್ತಿದ್ದು, ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ.