March 14, 2025

ಟಿವಿ ರಿಮೋಟ್ ಸಿಗದ ಕಾರಣಕ್ಕೆ 16 ವರ್ಷದ ಬಾಲಕಿ ಆತ್ಮಹತ್ಯೆ…!?

Spread the love


ಶಿವಮೊಗ್ಗ :
ಜಿಲ್ಲೆಯ ಸೂಳೆಬೈಲಿನಲ್ಲಿ 16 ವರ್ಷದ ಸಹನಾ ಎಂಬ ಬಾಲಕಿ ಟಿವಿ ರಿಮೋಟ್ ಸಿಗಲಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ದುಃಖಕರ ಘಟನೆ ವರದಿಯಾಗಿದೆ. ಅಜ್ಜಿ ರಿಮೋಟ್ ನೀಡದೆ ಬುದ್ದಿ ಹೇಳಿದ ಮಾತುಗಳಿಂದ ಬೇಸರಗೊಂಡ ಸಹನಾ ನಿನ್ನೆ ರಾತ್ರಿ ಇಲಿಪಾಶಾಣ ಸೇವಿಸಿದ್ದಾಳೆ. ತಕ್ಷಣವೇ ಕುಟುಂಬಸ್ಥರು ಸಹನಾಳನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.

ಸಣ್ಣಪುಟ್ಟ ವಿಷಯಗಳಿಂದ ಉಂಟಾಗುವ ಮಾನಸಿಕ ಒತ್ತಡಗಳು ತಾರಕಕ್ಕೇರಿದ್ದು, ಮಕ್ಕಳ ಮಾನಸಿಕ ಆರೋಗ್ಯ ಪೋಷಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಘಟನೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸಹನಾ ವಿದ್ಯಾರ್ಥಿನಿಯಾಗಿರಲಿಲ್ಲ ಎಂದು ತಿಳಿದುಬಂದಿದೆ.