
ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಜಿಗಣಿ ತಾಲೂಕಿನ ಮಾಯಸಂದ್ರದಲ್ಲಿ ಇಂದು ಮುಂಜಾನೆ ನಡೆದ ಘಟನೆಯಲ್ಲಿ, ರೌಡಿಶೀಟರ್ ಮನೋಜ್ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವುದು ವರದಿಯಾಗಿದೆ.

ಲೋಕಿ ಗ್ಯಾಂಗ್ ದಾಳಿಯಿಂದ ತಲೆಮರೆಸಿಕೊಂಡಿದ್ದ ಮನೋಜ್ ತಲೆಮರೆಸಿಕೊಂಡಿದ್ದ ಸ್ಥಳದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಆದರೆ, ಪೊಲೀಸರು ತಲುಪುತ್ತಿದ್ದಂತೆಯೇ, ಮನೋಜ್ ಅವರ ಮೇಲೆ ಹಲ್ಲೆ ಮಾಡುವ ಯತ್ನ ಮಾಡಿದ್ದು, ಬಳಿಕ ಪರಾರಿಯಾಗಲು ಪ್ರಯತ್ನಿಸುತ್ತಿದ್ದನು. ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಗಣಿ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಗುಂಡು ಹಾರಿಸಿದರು. ಗುಂಡು ಮನೋಜ್‌ನ ಕಾಲಿಗೆ ತಗಲಿದ್ದು, ಬಳಿಕ ಪೊಲೀಸರ ನಿಯಂತ್ರಣಕ್ಕೆ ಬಂದನು.
ಈ ಪ್ರಕರಣ ಸಂಬಂಧ ಪೊಲೀಸರಿಂದ ಮುಂದಿನ ತನಿಖೆ ನಡೆಯುತ್ತಿದೆ.