
ಶಿವಮೊಗ್ಗ:
ಜಿಲ್ಲೆಯ ಭದ್ರಾವತಿ ತಾಲೂಕಿನ ಮಲ್ಲಾಪುರ ಸಮೀಪ ಮಂಗೋಟೆ ಕ್ರಾಸ್ ಮತ್ತು ಮಲ್ಲಾಪುರದ ನಡುವಿನ ರಸ್ತೆ ಭಾಗದಲ್ಲಿ ಕ್ಯಾಂಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.
ಮೃತರನ್ನು ಹೊನ್ನಳ್ಳಿ ತಾಲೂಕಿನ ಲಿಂಗಪುರ ಗ್ರಾಮದ ನೀಲಕಂಠಪ್ಪ ಅವರ ಮೊಮ್ಮಗ ಭುವನ್ (ಡಿಪ್ಲೋಮಾ ವಿದ್ಯಾರ್ಥಿ) ಎಂದು ಗುರುತಿಸಲಾಗಿದೆ. ಈ ದುರ್ಘಟನೆಯ ತಕ್ಷಣ ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಾಗಿದೆ.
ಅಪಘಾತದ ಪರಿಣಾಮ ಭುವನ್ ಸ್ಥಳದಲ್ಲಿಯೇ ಮೃತನಾದರೆ, ಕ್ಯಾಂಟರ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಹೊಳೆಹೊನ್ನೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.