
ತುಮಕೂರು :
ಪಾವಗಡ ಪಟ್ಟಣದಲ್ಲಿ ಇಂದು ಬೆಳಗ್ಗೆ 7:22ರ ಸಮಯದಲ್ಲಿ ತುಮಕೂರು ರಸ್ತೆಯಲ್ಲಿರುವ SRS ಪೆಟ್ರೋಲ್ ಬಂಕ್ ಸಮೀಪ ಒಂದು ಭೀಕರ ಅಪಘಾತ ಸಂಭವಿಸಿದೆ. ಲಾರಿಗೆ ಬುಲೆರೋ ವಾಹನ ಡಿಕ್ಕಿಯಾದ ಪರಿಣಾಮ ಮಂಡ್ಯ ಮೂಲದ ಬುಲೆರೋ ಚಾಲಕ ಮೃತಪಟ್ಟಿದ್ದಾರೆ.

ತುಮಕೂರು ರಸ್ತೆಯಿಂದ ಪಾವಗಡದ ಕಡೆಗೆ ಬರುತ್ತಿದ್ದ ಬುಲೆರೋ, ಮುಂಭಾಗದಲ್ಲಿ ಹೋಗುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಲಾರಿ ಮುಂಭಾಗದಲ್ಲಿ ಓಮ್ನಿ ವಾಹನ ಅತಿವೇಗವಾಗಿ ದಾರಿ ಬದಲಾಯಿಸಿತ್ತು (ಯೂಟರ್ನ್ ತೆಗೆದುಕೊಂಡಿತ್ತು). ಲಾರಿ ಚಾಲಕ ತನ್ನ ವೇಗವನ್ನು ಕಡಿಮೆ ಮಾಡಿದಾಗ, ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬುಲೆರೋ ಲಾರಿಗೆ ಡಿಕ್ಕಿ ಹೊಡೆದಿದೆ ಡಿಕ್ಕಿಯಾದ ಪರಿಣಾಮ ಮಂಡ್ಯ ಮೂಲದ ಬುಲೆರೋ ಚಾಲಕ ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಸ್ಥಳಕ್ಕೆ ಪಾವಗಡ ಪೊಲೀಸ್ ಠಾಣೆಯ ಪಿಎಸ್‌ಐ ಗುರುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.