
ತುಮಕೂರು ನಗರದಲ್ಲಿ ಕಳ್ಳರ ಅಟ್ಟಹಾಸ ಮಿತಿ ಮೀರುತ್ತಿದ್ದು, ಒಂದೇ ರಾತ್ರಿ 6 ಅಂಗಡಿಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ. ನಗರದ ಬಿ.ಹೆಚ್. ರಸ್ತೆಯಾದ್ಯಂತ ಈ ಕೃತ್ಯ ನಡೆದಿದೆ. ಕಳ್ಳರು ತಡರಾತ್ರಿ ಈ ಅಂಗಡಿಗಳ ಬಾಗಿಲು ಮುರಿದು, ಸುಮಾರು ₹1 ಲಕ್ಷಕ್ಕೂ ಅಧಿಕ ನಗದು ಮತ್ತು ಇತರ ಮೌಲ್ಯಯುತ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಸರಣಿ ಕಳ್ಳತನದಲ್ಲಿ ಆಧೀಶ್ವರ ಮಾರ್ಕೆಟಿಂಗ್, ಬಿ.ಎಚ್. ರಸ್ತೆಯ ಅಪೋಲೋ ಮೆಡಿಕಲ್ ಸ್ಟೋರ್ ಸೇರಿದಂತೆ ಇನ್ನೂ ಅನೇಕ ಅಂಗಡಿಗಳು ಕಳ್ಳರ ದಾಳಿಗೆ ತುತ್ತಾಗಿವೆ.
ಈ ಘಟನೆ ಸ್ಥಳೀಯ ವ್ಯಾಪಾರಸ್ಥರಲ್ಲಿ ಆತಂಕ ಸೃಷ್ಟಿಸಿದ್ದು, ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿ ತನಿಖೆಯನ್ನು ಆರಂಭಿಸಿದ್ದಾರೆ.