
ತುಮಕೂರು ಮಲ್ಲಸಂದ್ರ ರೈಲು ನಿಲ್ದಾಣದ ಬಳಿ ಶುಕ್ರವಾರ, ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಸಾವಿಗೀಡಾದ ಘಟನೆ ನಡೆದಿದೆ.
ಮೃತ ವ್ಯಕ್ತಿ ಎಣ್ಣೆ ಕೆಂಪು ಮೈಬಣ್ಣ ಹೊಂದಿದ್ದು, ಚಿನ್ನದ ಗೆರೆಗಳಿರುವ ಕಪ್ಪು ಬಣ್ಣದ ಫುಲ್ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಬಲಗೈನಲ್ಲಿ “ಆರ್. ಸಿದ್ದು” ಮತ್ತು ಎಡಗೈನಲ್ಲಿ ತ್ರಿಶೂಲದ ಅಚ್ಚೆ ಗುರುತು ಇತ್ತು.
ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದರೆ, ದಯವಿಟ್ಟು ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ (080-228712291) ಅನ್ನು ಸಂಪರ್ಕಿಸಬಹುದು ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.