
ಬೆಂಗಳೂರಿನಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಯುವತಿಯ ಮೇಲಿನ ನಿರಂತರ ಅತ್ಯಾಚಾರದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆರೋಪಿಯನ್ನು ಬೆಂಗಳೂರಿನ ತಾವರೆಕೆರೆ ಬಳಿಯ ಹೊಸಪಾಳ್ಯ ನಿವಾಸಿ ಶ್ರೀಕಾಂತ ಎಂದು ಗುರುತಿಸಲಾಗಿದೆ.
ಶ್ರೀಕಾಂತ, ತನ್ನ ಮಾತುಗಳ ಮೂಲಕ ಯುವತಿಯನ್ನು ನಂಬಿಸುತ್ತಾ ಪ್ರೀತಿಯ ನಾಟಕವಾಡಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ, ಚಾಟ್ ಮೂಲಕ ಬಣ್ಣದ ಮಾತುಗಳಿಂದ ಯುವತಿಯ ನಂಬುಗೆ ಗೆದ್ದು, ನಿರಂತರವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಈ ಘಟನೆ ಸುಮಾರು ಒಂದು ವರ್ಷಗಳಿಂದ ನಡೆಯುತ್ತಿತ್ತು. ಸಂತ್ರಸ್ಥೆಯ ದೂರಿನ ಮೇರೆಗೆ , ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.