
ರಾಜಧಾನಿ ಬೆಂಗಳೂರಿನ ಕೋರಮಂಗಲದಲ್ಲಿ ಪ್ರೀತಿಯ ಹೆಸರಿನಲ್ಲಿ ದೋಚಿದ ಪ್ರಕರಣ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ನೆಲ್ಲೂರಿನ ಶಿವ ಮತ್ತು ಮೋನಿಕಾ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಮೋನಿಕಾ, ಶಿವನಿಗೆ ಕರೆ ಮಾಡಿ, “ನನ್ನ ಸ್ನೇಹಿತರು ನಿನ್ನನ್ನು ನೋಡಬೇಕು, ಚಿನ್ನಾಭರಣ ಹಾಕಿಕೊಂಡು ಕಾರಿನಲ್ಲಿ ಬಾ” ಎಂದು ಕೇಳಿದ್ದಳು. ಪ್ರಿಯತಮೆಯ ಮಾತಿಗೆ ಮರುಗಿದ ಶಿವ, ಚಿನ್ನಾಭರಣ ಧರಿಸಿ ಕಾರಿನಲ್ಲಿ ಕೋರಮಂಗಲಕ್ಕೆ ಬಂದಿದ್ದನು.
ಆದರೆ, ಅಲ್ಲಿ ಪ್ರಿಯತಮೆ ಮತ್ತು ಆಕೆಯ ಸ್ನೇಹಿತರ ಶಡ್ಯಂತ್ರ ತಕ್ಷಣವೇ ಬೆಳಕಿಗೆ ಬಂದಿದೆ. ಶಿವನನ್ನು ಕಿಡ್ನಾಪ್ ಮಾಡಿ, ಆತನ ಚಿನ್ನಾಭರಣ ದೋಚಲಾಗಿದೆ. ನಂತರ ತಕ್ಷಣವೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಶಿವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.