March 14, 2025

ತುಮಕೂರು: ದಲಿತ ಮಹಿಳೆ ಕೊಲೆ ಪ್ರಕರಣಕ್ಕೆ 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ,,,,!

Spread the love


ತುಮಕೂರು :
2010ರಲ್ಲಿ ತುಮಕೂರು ಜಿಲ್ಲೆಯ ಗೋಪಾಲಪುರ ಗ್ರಾಮದಲ್ಲಿ ನಡೆದ ದಲಿತ ಮಹಿಳೆ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ, 14 ವರ್ಷಗಳ ಬಳಿಕ, ಈ ಪ್ರಕರಣಕ್ಕೆ ಮಹತ್ವದ ತೀರ್ಪು ಹೊರಬಿದ್ದಿದ್ದು, ತುಮಕೂರು 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ನ್ಯಾಯಾಲಯವು ಪ್ರತಿಯೊಬ್ಬ ಆರೋಪಿಗೆ 13,500 ರೂಪಾಯಿ ದಂಡವೂ ವಿಧಿಸಿದೆ. ದಲಿತ ಮಹಿಳೆಯ ಹತ್ಯೆಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತಾತ್ವಿಕ ಅಡಿಪಾಯವನ್ನು ಸವಾಲು ಮಾಡಿತೆಂದು ತೀರ್ಪು ಸಾರಲಾಗಿದೆ. ಈ ತೀರ್ಪು ದಲಿತರ ಹಕ್ಕುಗಳನ್ನು ರಕ್ಷಿಸುವ ಮತ್ತು ಇಂತಹ ಅಪರಾಧಗಳನ್ನು ತಡೆಯುವ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ನ್ಯಾಯಾಲಯದ ತೀರ್ಪು ದಲಿತ  ಕುಟುಂಬಕ್ಕೆ ಕಾನೂನು ಸೂಕ್ತ ನ್ಯಾಯ ಒದಗಿಸಿರುವುದು ಮಾತ್ರವಲ್ಲ, ಇಡೀ ಸಮಾಜಕ್ಕೆ ಸಂದೇಶವನ್ನೂ ನೀಡಿದೆ.