March 14, 2025

ಬಾಂಗ್ಲಾ  ಶಂಕಿತ ನುಸುಳುಕೋರರ ಬಂಧನ…!?

Spread the love

ಚಿತ್ರದುರ್ಗ:

ನಗರದ ಖಾಸಗಿ ಗಾರ್ಮೆಂಟ್ಸ್ ಮೇಲೆ ಸೋಮವಾರ ರಾತ್ರಿ ನಡೆಸಿದ ಪೊಲೀಸರ ದಾಳಿಯಲ್ಲಿ ಆರು ಮಂದಿ ಬಾಂಗ್ಲಾ ನುಸುಳುಕೋರರನ್ನು ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿಯ ಆಧಾರದಲ್ಲಿ ಚಿತ್ರದುರ್ಗ ಡಿವೈಎಸ್ಪಿ ದಿನಕ‌ರ್, ಸಿಪಿಐ ಗುಡ್ಡಪ್ಪ, ವೆಂಕಟೇಶ ಅವರ ನೇತೃತ್ವದಲ್ಲಿ ಪೋಲಿಸ್‌ ತಂಡ ಈ ಕಾರ್ಯಚಟುವಟಿಕೆಗೆ ಮುಂದಾಗಿದೆ. ಗಾರ್ಮೆಂಟ್ಸ್‌ ಮೇಲೆ ದಾಳಿ ಮಾಡುವುದರೊಂದಿಗೆ, ಹೆಚ್ಚಿನ ಪರಿಶೀಲನೆಗಾಗಿ ಪೊಲೀಸರು ನಗರದ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.



ಈ ಕಾರ್ಯಾಚರಣೆಯಲ್ಲಿ ಮೊದಲ ವರದಿಯಲ್ಲಿ ಆರು ಮಂದಿ ಬಾಂಗ್ಲಾ ನುಸುಳುಕೋರರು ವಶಕ್ಕೆ ಪಡೆಯಲ್ಪಟ್ಟಿದ್ದು, ನಂತರ ಮುಂದುವರೆದ ಕಾರ್ಯಾಚರಣೆಯಲ್ಲಿ 15 ಮಂದಿ ಶಂಕಿತ ನುಸುಳುಕೋರರನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕ್ರಿಯೆಯು ಸ್ಥಳೀಯ ನಾಗರಿಕರ ಭದ್ರತೆಗೆ ತಕ್ಕ ಕ್ರಮವಾಗಿದ್ದು, ಶಂಕಿತವರಿಂದ ಸಂಗ್ರಹಿತ ಮಾಹಿತಿಯನ್ನು ಪೊಲೀಸರು ಇದೀಗ ಪರಿಶೀಲಿಸುತ್ತಿದ್ದಾರೆ.

ಬಾಂಗ್ಲಾದೇಶದಿಂದ ಬರುವ ನುಸುಳುಕೋರರ ಹಾವಳಿ ತಡೆಯಲು ಭದ್ರತಾ ದೃಷ್ಟಿಯಿಂದ ಚಿತ್ರದುರ್ಗ ಪೊಲೀಸ್‌  ಅಧಿಕಾರಿಗಳು ಭದ್ರತ ಕಾರ್ಯಾಚರಣೆ ಮುಂದುವರಿಸಿದ್ದಾರೆ.