
ತಮಿಳುನಾಡಿನಲ್ಲಿ 1997ರಲ್ಲಿ 60 ರೂ. ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು 27 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಶಿವಕಾಶಿಯಲ್ಲಿ ನಡೆದಿದ್ದು, ಆರೋಪಿಯ ಹೆಸರು ಪನ್ನೀರಸೆಲ್ವಂ (55) ಎಂಬುದಾಗಿದೆ.
1997ರಲ್ಲಿ ಪನ್ನೀರಸೆಲ್ವಂ 60 ರೂ. ಕದ್ದ ನಂತರ ತಲೆಮರೆಸಿಕೊಂಡಿದ್ದಾನೆ. ಈ ಹಿಂದೆ ಪ್ರಕರಣವನ್ನು ಮುಕ್ತಾಯಗೊಳಿಸದೆ ಬಾಕಿ ಉಳಿದಿದ್ದರಿಂದ, ಮಧುರೈ ಪೊಲೀಸರು ಅದರ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸಿದರು.
ಪೊಲೀಸರು ಆತನನ್ನು ಪತ್ತೆಹಚ್ಚಲು ಜನಸಂಖ್ಯಾ ಮಾಪನಾಧಿಕಾರಿಗಳ ನೆಪದಲ್ಲಿ ಆತನ ಮನೆಗೆ ತೆರಳಿದರು. ಪನ್ನೀರಸೆಲ್ವಂನ ಹಳೆಯ ಫೋಟೋವನ್ನು ಬಳಸಿಕೊಂಡು, ಆತನನ್ನು ಗುರುತಿಸಿದ ನಂತರ ಬಂಧಿಸಿದರು.