March 14, 2025

ಸೂಕ್ತ ಧಾಖಲೆ ಸಂಗ್ರಹಿಸದೆ ನಿರ್ಲಕ್ಷ್ಯತನಾ ತೋರಿದ PDO ಅಮಾನತು…!

Spread the love

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ  (ಜೆಜೆ ಹಳ್ಳಿ )ಗ್ರಾಮ ಪಂಚಾಯಿತಿ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಿ. ಈಶ್ವರ್ ಅವರನ್ನು ಅಮಾನತುಗೊಳಿಸುವಂತೆ ಜಿಲ್ಲಾ ಪಂಚಾಯಿತಿಯ ಸಿಇಒ ಎಸ್.ಜೆ. ಸೋಮಶೇಖರ್ ಆದೇಶಿಸಿದ್ದಾರೆ.

ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ 15 ಹಣಕಾಸಿನ ವೆಚ್ಚದ ವಿವರಗಳನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ನೀಡದೆ, ಅಹಂಕಾರ ತೋರಿದ ಈಶ್ವರ್, ಹಾಜರುಪಡಿಸಬೇಕಾದ ದಾಖಲೆಗಳನ್ನೂ ಸಂಗ್ರಹಿಸದೇ ನಿರ್ಲಕ್ಷ್ಯ ಪ್ರದರ್ಶಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಲು ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ನಿಯೋಜಿತ ತನಿಖಾ ತಂಡದ ಮುಂದೆ ದಸ್ತಾವೇಜುಗಳು ಮತ್ತು ಲೆಕ್ಕಪತ್ರಗಳನ್ನು ನೀಡದ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಹಣಕಾಸಿನ ಲೆಕ್ಕದ ವ್ಯವಹಾರಗಳಲ್ಲಿ ತೊಂದರೆ ಉಂಟಾಗಿದ್ದು, ನಿರ್ವಹಣೆ ನಿರ್ಲಕ್ಷ್ಯದಿಂದ ಇವರ ಕರ್ತವ್ಯ ಲೋಪವಾಗಿರುವುದಾಗಿ ಕಂಡು ಬಂದಿದೆ.

ಸಾರ್ವಜನಿಕ ಸೇವೆಯ ನಡವಳಿಕೆಗೆ ಸಂಬಂಧಿಸಿದ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ 1966ರ ನಿಯಮ 3(1) (II) ಹಾಗೂ (III) ಉಲ್ಲಂಘಿಸಿರುವುದರಿಂದ, ಸರ್ಕಾರದ ಆದೇಶದ ಮೇರೆಗೆ ಸಿ.ಈಶ್ವರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ರಾಜ್ಯ ದ್ಯಂತ pdo ರವರ ಪ್ರಕರಣಗಳು ಹೆಚ್ಚಾಗಿದ್ದು , ಸಾರ್ವಜನಿಕರ ಕರೆಗೆ ಸ್ಪಂದಿಸದೆ ಇರುವುದು ಗ್ರಾ. ಪಂ.ಅಭಿವೃದ್ಧಿ ಅಧಿಕಾರಿಗಳು ತನ್ನ ಕರ್ತವ್ಯವನ್ನೇ ಮರೆತು ಅಹಂಕಾರ ಮೆರೆಯುತ್ತಿರುವ ಪ್ರಕರಣ ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿರುತ್ತಿದೆ ಇಂತಹ pdo ರವರಿಗೆ, ಸಿಂಹಸ್ವಾಪ್ನ ವಾಗಿರುವ ಜಿಲ್ಲಾ ಪಂಚಾಯಿತಿಯ ಸಿಇಒ  ಅಧಿಕಾರಿಗಳು ಸಾರ್ವಜನಿಕರ ದೂರಿನ ಆದರದ ಮೇರೆಗೆ ತಕ್ಷಣವೇ ಅಂಥವರ ವಿರುದ್ಧ ಕ್ರಮ ಕೈಗೊಳ್ಳುಲು ಮುಂದಾಗಿದ್ದಾರೆ.